ADVERTISEMENT

ಜೀ 5 ನಲ್ಲಿ ‘ಬ್ಲ್ಯಾಕ್ ವಿಡೊ’

ವೆಬ್‌ ಸರಣಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 19:30 IST
Last Updated 10 ಡಿಸೆಂಬರ್ 2020, 19:30 IST
ಬ್ಲ್ಯಾಕ್ ವಿಡೊ
ಬ್ಲ್ಯಾಕ್ ವಿಡೊ   

ತಮ್ಮ ಗಂಡಂದಿರ ದೌರ್ಜನ್ಯದ ವಿರುದ್ಧ ಹೋರಾಡುವ ಮೂವರು ಮಹಿಳೆಯರ ಕಥೆ ‘ಬ್ಲ್ಯಾಕ್ ವಿಡೊ’. ಗಂಡಂದಿರ ದೌರ್ಜನ್ಯದಿಂದ ಬೇಸತ್ತ ಕವಿತಾ, ಜಯತಿ ಹಾಗೂ ವೀರ ಒಂದಾಗಿ ಉಪಾಯದಿಂದ ತಮ್ಮ ಗಂಡಂದಿರನ್ನು ಕೊಲೆ ಮಾಡುತ್ತಾರೆ. ಕೊಲೆ ಯೋಜನೆಯಲ್ಲಿ ಕೆಲವೊಂದು ಸಾಕ್ಷಿಗಳನ್ನು ಹಾಗೇ ಉಳಿಸಿರುತ್ತಾರೆ. ಚಾಲಾಕಿ ಪೊಲೀಸ್ ಅಧಿಕಾರಿಯೊಬ್ಬನಿಗೆ ಈ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ. ಈ ಪೊಲೀಸ್ ಅಧಿಕಾರಿಗೆ ಈ ಮೂವರು ಮಹಿಳೆಯರ ಮೇಲೆ ಅನುಮಾನ ಆರಂಭವಾಗುತ್ತದೆ. ಅಲ್ಲಿಂದ ಅವರ ಕಷ್ಟದ ದಿನಗಳು ಆರಂಭವಾಗುತ್ತವೆ. ಮುಂದೆ ಕೊಲೆ ಅಪರಾಧ ಸಾಬೀತಾಗಿ ಆ ಮೂವರು ಶಿಕ್ಷೆ ಅನುಭವಿಸುತ್ತಾರಾ? ಅವರ ಮುಂದಿನ ದಿನಗಳು ಹೇಗಿರುತ್ತವೆ? ಎಂಬುದು ಈ ವೆಬ್‌ಸರಣಿಯ ಸಾರಾಂಶ. ‌ಈ ಸರಣಿಯು ಡಿಸೆಂಬರ್‌ 18ಕ್ಕೆ ಜೀ 5 ನಲ್ಲಿ ಬಿಡುಗಡೆಯಾಗಲಿದೆ.

ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ, ಮೋನಾ ಸಿಂಗ್, ಸಾತ್ವಿಕಾ ಮುಖರ್ಜಿ, ರೈಮಾ ಸೇನ್‌, ಶರದ್ ಕೇಳ್ಕರ್‌, ಪರಂಭ್ರತಾ ಚಟ್ಟೊಪಾಧ್ಯಾಯ, ಆಮೀರ್ ಅಲಿ, ಸವ್ಯಸಾಚಿ ಚಕ್ರವರ್ತಿ ವೆಬ್‌ಸರಣಿಯಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಬಿಸ್ರಾ ದಾಸ್‌ಗುಪ್ತಾ ಈ ಸರಣಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸರಣೆಯು ಒಟ್ಟು 12 ಎಪಿಸೋಡ್‌ಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT