ADVERTISEMENT

ಚಿತ್ರೋದ್ಯಮದ ಅಭಿವೃದ್ಧಿ ಕುರಿತು ಚರ್ಚೆ: ಬಾಲಿವುಡ್‌ ನಿಯೋಗದಲ್ಲಿ ಮಹಿಳೆಯರಿಲ್ಲ!

ಪಿಟಿಐ
Published 19 ಡಿಸೆಂಬರ್ 2018, 19:38 IST
Last Updated 19 ಡಿಸೆಂಬರ್ 2018, 19:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಹಿಂದಿ ಚಲನಚಿತ್ರ ಉದ್ಯಮದ ಅಭಿವೃದ್ಧಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಬಾಲಿವುಡ್‌ ನಿಯೋಗದಲ್ಲಿ ಕೇವಲ ಪುರುಷರೇ ಇದ್ದುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

‘2018ರ ಈ ಕಾಲಘಟ್ಟದಲ್ಲಿ ನಿಮ್ಮ ನಿಯೋಗದಲ್ಲಿ ಮಹಿಳೆಯರು ಎಲ್ಲಿದ್ದಾರೆ’ ಎಂದು ಕೆಲವು ಸಾಮಾಜಿಕ ಕಾರ್ಯಕರ್ತರು ಮತ್ತು ಚಿತ್ರ ನಿರ್ಮಾಪಕರು ಪ್ರಶ್ನಿಸಿದ್ದಾರೆ.

ಮಂಗಳವಾರ ತೆರಳಿದ್ದ 18 ಜನರ ನಿಯೋಗದಲ್ಲಿ ಕರಣ್‌ ಜೋಹರ್‌, ಅಜಯ್ ದೇವಗನ್‌, ಸಿದ್ಧಾರ್ಥ್ ರಾಯ್‌ ಕಪೂರ್, ಅಕ್ಷಯ್‌ ಕುಮಾರ್, ರಿತೇಶ್‌ ಸಿಧ್ವಾನಿ, ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್‌ ಜೋಷಿ ಮತ್ತಿತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.