ADVERTISEMENT

ಬಾಲಿವುಡ್‌ ನಟಿ ಅನ್ನೆ ಕಾರು ಅಪಘಾತ: ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 9:30 IST
Last Updated 6 ಆಗಸ್ಟ್ 2022, 9:30 IST
ನಟಿ ಅನ್ನೆ ಹಚೆ
ನಟಿ ಅನ್ನೆ ಹಚೆ   

ವಾಷಿಂಗ್ಟನ್‌: ಅಮೆರಿಕದ ಬಾಲಿವುಡ್‌ ನಟಿ ಅನ್ನೆ ಹಚೆ ಅವರ ಕಾರು ಅಫಘಾತವಾಗಿದ್ದು ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಟಿಅನ್ನೆ ಕಾರುಲಾಸ್ ಏಂಜಲೀಸ್‌ನಲ್ಲಿರುವ ಮನೆಯೊಂದಕ್ಕೆ ಡಿಕ್ಕಿ ಹೊಡೆದಿದೆ ಎಂದು ಅಮೆರಿಕ ಪೊಲೀಸರು ತಿಳಿಸಿದ್ದಾರೆ. ನಟಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

ಕಾರಿನಲ್ಲಿ ಮತ್ತೊಬ್ಬ ಯುವತಿ ಪ್ರಯಾಣ ಮಾಡುತ್ತಿದ್ದು ಆಕೆಯ ಸ್ಥಿತಿಯು ಕೂಡ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಡಿಕ್ಕಿಯ ರಭಸಕ್ಕೆ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಸ್ಥಳೀಯ ಕಾರಿನಲ್ಲಿ ಇದ್ದವರನ್ನು ರಕ್ಷಣೆ ಮಾಡಿದ್ದಾರೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.