
ನವದೆಹಲಿ: ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಮಂಗಳವಾರ ತಾವು ಕಣ್ಣಿನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದಾಗಿ ಹೇಳಿದ್ದಾರೆ. ನಾನು ಬಲಶಾಲಿ ಎಂದು ಹೇಳುವ ಮೂಲಕ ಶೀಘ್ರ ಚೇತರಿಕೆ ಕುರಿತಂತೆ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಮುಂಬೈ ಆಸ್ಪತ್ರೆಯಿಂದ ಹೊರಬಂದ 89 ವರ್ಷದ ನಟ ಬಲಗಣ್ಣಿಗೆ ಬ್ಯಾಂಡೇಜ್ ಹಾಕಿಕೊಂಡಿದ್ದರು. ಧರ್ಮೇಂದ್ರ ಆಸ್ಪತ್ರೆಯ ಹೊರಗೆ ಪಾಪರಾಜಿಗಳೊಂದಿಗೆ ಸಂವಾದ ನಡೆಸಿದರು.
ನಾನು ಇನ್ನೂ ತುಂಬಾ ಬಲಶಾಲಿಯಾಗಿದ್ದೇನೆ. ಜೀವನೋತ್ಸಾಹದಿಂದಿದ್ದೇನೆ. ನನಗೆ ಕಣ್ಣಿನ ಕಸಿ ಶಸ್ತ್ರಚಿಕಿತ್ಸೆ ಆಗಿದೆ. ಅಭಿಮಾನಿಗಳೇ ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಾನು ಬಲಶಾಲಿಯಾಗಿದ್ದೇನೆ ಎಂದು ಧರ್ಮೇಂದ್ರ ಹೇಳಿದ್ದಾರೆ.
ಆದರೆ, ಧರ್ಮೇಂದ್ರ ಅವರಿಗೆ ಎಲ್ಲಿ ಮತ್ತು ಯಾವಾಗ ಶಸ್ತ್ರಚಿಕಿತ್ಸೆ ನಡೆದಿದೆ ಎಂಬ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಧರ್ಮೇಂದ್ರ ಮುಂದಿನ ಚಿತ್ರ ಶ್ರೀರಾಮ್ ರಾಘವನ್ ಅವರ ವಾರ್ ಡ್ರಾಮಾ ‘ಇಕ್ಕಿಸ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2023ರಲ್ಲಿ ಬಿಡುಗಡೆಯಾದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.