ADVERTISEMENT

Kannada Movie: ಹೊರಬಂತು ‘ಬ್ರ್ಯಾಟ್‌’ ಹೊಸ ಹಾಡು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 23:30 IST
Last Updated 16 ಸೆಪ್ಟೆಂಬರ್ 2025, 23:30 IST
ಡಾರ್ಲಿಂಗ್‌ ಕೃಷ್ಣ
ಡಾರ್ಲಿಂಗ್‌ ಕೃಷ್ಣ   

ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ‘ಬ್ರ್ಯಾಟ್‌’ ಚಿತ್ರದ ‘ಗಂಗಿ ಗಂಗಿ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. 

ಬಾಳು ಬೆಳಗುಂದಿ ಸಾಹಿತ್ಯ ಬರೆದು ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ‘ಕುರಿಗಾಹಿಯಾಗಿದ್ದ ನಾನು, ಜನಪದ ಶೈಲಿಯ ಅನೇಕ ಗೀತೆಗಳನ್ನು ರಚಿಸಿ ಹಾಡುತ್ತಿದ್ದೆ. ಆನಂತರ ರಿಯಾಲಿಟಿ ಶೋದಲ್ಲಿ ಭಾಗಿಯಾದೆ. ಆಗ ಅರ್ಜುನ್ ಜನ್ಯ ಅವರು ಸಿನಿಮಾವೊಂದರಲ್ಲಿ ಹಾಡಿಸುತ್ತೇನೆ ಎಂದಿದ್ದರು. ಈ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ’ ಎಂದರು ಬಾಳು ಬೆಳಗುಂದಿ.

ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಮಂಜುನಾಥ್ ಕಂದಕೂರ್ ಬಂಡವಾಳ ಹೂಡಿದ್ದಾರೆ. ‘ಬ್ರ್ಯಾಟ್’ ಎಂದರೆ ತರ್ಲೆ ಹುಡುಗ ಹಾಗೂ ದಾರಿ ತಪ್ಪಿದ ಮಗ ಎನ್ನಬಹುದು. ನಮ್ಮ ಚಿತ್ರ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದರೂ, ಅಪ್ಪ-ಮಗನ ಬಾಂಧವ್ಯ ಸಾರುತ್ತದೆ. ಸಿದ್ ಶ್ರೀರಾಮ್ ಹಾಡಿರುವ ‘ನಾನೇ ನೀನಂತೆ’ ಹಾಡಿಗೆ ಪ್ರೇಕ್ಷಕರಿಂದ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಾಡಿಗೂ ಅದೇ ರೀತಿ ಪ್ರೀತಿ ನೀಡಿ. ನವೆಂಬರ್ 14 ರಂದು ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕ ಶಶಾಂಕ್‌. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.