ADVERTISEMENT

ಇದು ‘ಕ್ಯಾಂಪಸ್‌ ಕ್ರಾಂತಿ’

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 18:47 IST
Last Updated 7 ಫೆಬ್ರುವರಿ 2023, 18:47 IST
ಅಲಂಕಾರ್‌, ಇಶಾನಾ
ಅಲಂಕಾರ್‌, ಇಶಾನಾ   

ಕಾಲೇಜು ಹುಡುಗರ ನಡುವೆ ನಡೆಯುವ ಕಥೆಯೇ ‘ಕ್ಯಾಂಪಸ್‌ ಕ್ರಾಂತಿ’. ಸಂತೋಷ್‌ ಕುಮಾರ್‌ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಇತ್ತೀಚೆಗೆ ಟ್ರೈಲರ್‌ ಬಿಡುಗಡೆಯಾಗಿದ್ದು ಕೊಂಚ ನಿರೀಕ್ಷೆ ಹುಟ್ಟು ಹಾಕಿದೆ. ಆರ್ಯ – ಆರತಿ, ಅಲಂಕಾರ್ – ಇಶಾನಾ ನಾಯಕ, ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ನಟ ಕೀರ್ತಿರಾಜ್‌ ಅವರದ್ದು ಈ ಚಿತ್ರದಲ್ಲಿ ಉದ್ಯಮಿಯ ಪಾತ್ರ. ವಾಣಿಶ್ರೀ ಅವರಿಗೆ ತಾಯಿಯ ಪಾತ್ರ.

‘ಇದು ಕರ್ನಾಟಕ, ಮಹಾರಾಷ್ಟ್ರ ಗಡಿಯ ಅಗ್ನಿರಾಂಪುರ ಎಂಬ ಕಾಲ್ಪನಿಕ ಊರೊಂದರಲ್ಲಿ ನಡೆಯುವ ಕಥೆ. 1947ರಲ್ಲಿ ನಮಗೆಲ್ಲ ಸ್ವಾತಂತ್ರ್ಯ ಬಂತು. ಆಗ ಶಾಂತಿಯಿಂದಲೇ ಹೋರಾಡಿ ಗೆದ್ದಿದ್ದೇವೆ‌. ಎಲ್ಲರ ಮನಸನ್ನು ಗೆದ್ದು ಕ್ರಾಂತಿ ಮಾಡಬೇಕು. ಗಡಿ ಭಾಗದಲ್ಲಿ ಲೋಕಲ್ ಕ್ರೈಮ್, ರೌಡಿಸಂ ಹೇಗಿರುತ್ತದೆ, ಅದು ಹುಡುಗರ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಇದನ್ನೆಲ್ಲ ಆ ಹುಡುಗರು ಹೇಗೆ ತಡೆಯುತ್ತಾರೆ, 21 ವರ್ಷಗಳಿಂದಲೂ ಆ ಊರಲ್ಲಿ ಕನ್ನಡ ರಾಜ್ಯೋತ್ಸವ ನಿಂತು ಹೋಗಿರುತ್ತದೆ, ಈ ಹುಡುಗರೆಲ್ಲ ಸೇರಿ ಅಲ್ಲಿ ಮತ್ತೆ ರಾಜ್ಯೋತ್ಸವ ಆಚರಿಸುತ್ತಾರೆ... ಹೀಗೆ ಕಥೆ ಸಾಗುತ್ತದೆ.

ADVERTISEMENT

ವಿ.ಮನೋಹರ್ ಅವರು ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ಮಾಡಿದ್ದಾರೆ. ಪಿ.ಕೆ.ಎಚ್.ದಾಸ್ ಅವರ ಛಾಯಾಗ್ರಹಣವಿದೆ. ಇನ್ನು ಚಿತ್ರದಲ್ಲಿ 5 ಸಾಹಸ ದೃಶ್ಯಗಳಿವೆ. ಕುಂಗ್ ಫು ಚಂದ್ರು ಸಾಹಸ ಸಂಯೋಜನೆ ಮಾಡಿದ್ದಾರೆ. ಫ್ಯಾಷನ್ ಮೂವಿ ಮೇಕರ್ಸ್‌ ಮೂಲಕ ನಿರ್ದೇಶಕ ಸಂತೋಷ್‌ಕುಮಾರ್ ಅವರೇ ಈ ಚಿತ್ರ ನಿರ್ಮಿಸಿದ್ದಾರೆ. ಹನುಮಂತೇಗೌಡ್ರು, ಭವಾನಿ ಪ್ರಕಾಶ್, ಧನಂಜಯ್ ಇತರ ಪಾತ್ರಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.