ADVERTISEMENT

ಬರೀ ಮೈಗೆ ದಿಂಬೇ ವಸ್ತ್ರ: ಕ್ವಾರಂಟೈನ್‌ ಪಿಲ್ಲೋ ಚಾಲೆಂಜ್‌ಗೆ ಬೆತ್ತಲೆ ಸವಾಲು!

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 10:16 IST
Last Updated 23 ಏಪ್ರಿಲ್ 2020, 10:16 IST
ನಟಿ ರಜಪೂತ್‌ ಪಾಯಲ್‌
ನಟಿ ರಜಪೂತ್‌ ಪಾಯಲ್‌   

ಬೆಂಗಳೂರು: ಇಡೀ ಜಗತ್ತೇ ಲಾಕ್‌ಡೌನ್‌ ಆಗಿರುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪಿಲ್ಲೋ ಚಾಲೆಂಜ್‌ ಸಖತ್‌ ಟ್ರೆಂಡ್‌‌ ಆಗಿದ್ದು ಯುವಕ, ಯುವತಿಯರು ಈ ಹೊಸ ಚಾಲೆಂಜ್‌ಗೆ ಮಾರು ಹೋಗಿ ತಮ್ಮ ಪಿಲ್ಲೋ ಚಾಲೆಂಜ್‌ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಹೌದು, #QuarantinePillowChallenge​ ಯುರೋಪ್‌ ದೇಶಗಳಲ್ಲೂ ಹುಟ್ಟಿಕೊಂಡು ಭಾರತಕ್ಕೂ ಹಬ್ಬಿದೆ. ದೇಶದ ಹಲವಾರು ಸೆಲೆಬ್ರಿಟಿಗಳು ಈ ಚಾಲೆಂಜ್ ಅನ್ನು ಒಪ್ಪಿಕೊಂಡು ತಮ್ಮ ಪಿಲ್ಲೋ ಚಾಲೆಂಜ್‌ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ.

ಮನೆಗಳಲ್ಲಿ​ ಕ್ವಾರಂಟೈನ್​ನಲ್ಲಿ ಇರುವವರ ನಡುವೆ ಈ ಚಾಯಯಯುರೋಪ್,ಲೆಂಜ್​ ಹುಟ್ಟಿಕೊಂಡಿದೆ. ಇದು ಸಾಮಾಜಿಕ ಜಾಲತಾಣಗಳ ಮೂಲಕ ಟ್ರೆಂಡ್​ ಆಗಿದ್ದು ರಷ್ಯಾ,ಸ್ಪಾನೀಷ್, ಇಟಲಿ ಸೇರಿದಂತೆ ಯುರೋಪ್‌ದೇಶಗಳಲ್ಲಿ ಪಿಲ್ಲೋ ಚಾಲೆಂಜ್‌ವೈರಲ್ ಆಗುತ್ತಿದೆ. ಯುವತಿಯರು ಮಾತ್ರವಲ್ಲದೇ ಯುವಕರು ಕೂಡ ಈ ಚಾಲೆಂಜ್‌ಗೆ ಫಿದಾ ಆಗಿದ್ದಾರೆ.

ADVERTISEMENT

ಹಾಲಿವುಡ್‌ ಹಾಗೂ ಬಾಲಿವುಡ್‌ನ ನಟ, ನಟಿಯರು, ಗಾಯಕರು ಕೂಡ ಈ ಚಾಲೆಂಜ್‌ ಸ್ವೀಕಾರಮಾಡಿದ್ದಾರೆ. ಬಾಲಿವುಡ್‌ ಗಾಯಕಿ ನೇಹಾ ಕಕ್ಕರ್, ನಟಿಯರಾದ ಪಾಯಲ್‌ ರಜಪೂತ್, ಸುರಭಿ ಹಾಗೂ ಸ್ಕಾರ್ಲೇಟ್ ರೋಸ್‌‌ ಅವರಪಿಲ್ಲೋ ಚಾಲೆಂಜ್‌ ಫೋಟೊಗಳುಸದ್ಯ ವೈರಲ್‌ ಆಗುತ್ತಿವೆ. ಈ ಚಾಲೆಂಜ್‌ ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿಹೆಚ್ಚು ಜನಪ್ರಿಯತೆ ಪಡೆಯುತ್ತಿದೆ.

ಸದ್ಯ ಲಾಕ್‌ಡೌನ್‌ನಲ್ಲಿ ಇರುವ ಸೆಲೆಬ್ರಿಟಿಗಳು ಈ ಚಾಲೆಂಜ್‌ ಸ್ವೀಕರ ಮಾಡುತ್ತಿದ್ದು ತಮ್ಮ ಪರಿಚಿತರು, ಗೆಳೆಯರಿಗೂ ಚಾಲೆಂಜ್‌ ಸ್ವೀಕಾರ ಮಾಡುವಂತೆ ಸವಾಲು ಹಾಕುತ್ತಿದ್ದಾರೆ.

ಚಾಲೆಂಜ್‌ ಸ್ವೀಕಾರ ಹೇಗೆ..?

ಬರೀ ಮೈಯಲ್ಲಿ ಎದೆಯ ಭಾಗದಿಂದ ತೊಡೆಯವರೆಗೂ ಪಿಲ್ಲೋವನ್ನು ಕಟ್ಟಿಕೊಳ್ಳುವುದೇ ಈ ಚಾಲೆಂಜ್‌ನ ವೈಶಿಷ್ಟ್ಯವಾಗಿದೆ. ಬಣ್ಣ ಬಣ್ಣದ ಪಿಲ್ಲೋಗಳನ್ನು ಕಟ್ಟಿಕೊಂಡು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದರೆ ಟಾಸ್ಕ್‌ ಪೂರ್ಣಗೊಳ್ಳುತ್ತದೆ.

ಕ್ವಾರಂಟೈನ್‌ ಬೇಸರದ ನಡುವೆ ಸಾಮಾಜಿಕ ಜಾಲತಾಣಗಳ ಮೂಲಕ ಹೊರಗಿನ ಜಗತ್ತಿನ ಜನರೊಂದಿಗೆ ಬೆರೆಯಲು ಇಂತಹ ಚಾಲೆಂಜ್‌ಗಳು ಅವಶ್ಯಕ. ಆದರೆ ಅದು ಅಶ್ಲೀಲತೆಯಾಗಬಾರದು ಎಂದು ಅಮೆರಿಕದ ಮನೋವೈದ್ಯ ಕ್ರಿಶ್‌ ಪೋರಿಯಾ ಅಭಿಪ್ರಾಯ ಪಡುತ್ತಾರೆ.

ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಸಾಕು ಪ್ರಾಣಿಗಳಾದ ನಾಯಿ ಬೆಕ್ಕುಗಳಿಗೂ ಪಿಲ್ಲೋ ಚಾಲೆಂಜ್‌ ಮಾಡಿಸಿದ್ದಾರೆ. ಲಾಕ್‌ಡೌನ್‌ ಮಧ್ಯೆ ಪಿಲ್ಲೋಗೂ ಬೇಡಿಕೆ ಸೃಷ್ಟಿಯಾಗಿರುವುದು ಸುಳ್ಳಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.