ADVERTISEMENT

83: ಸಂದೀಪ್‌ ಪಾಟೀಲ್‌ ಪಾತ್ರದಲ್ಲಿ ನಟಿಸಿರುವ ಕುರಿತು ಮಗ ಚಿರಾಗ್‌ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಡಿಸೆಂಬರ್ 2021, 6:35 IST
Last Updated 25 ಡಿಸೆಂಬರ್ 2021, 6:35 IST
ಸಂದೀಪ್‌ ಪಾಟೀಲ್‌ ಮತ್ತು ಚಿರಾಗ್‌ ಪಾಟೀಲ್‌
ಸಂದೀಪ್‌ ಪಾಟೀಲ್‌ ಮತ್ತು ಚಿರಾಗ್‌ ಪಾಟೀಲ್‌   

ನವದೆಹಲಿ:'83' ಚಿತ್ರವು ಶುಕ್ರವಾರಬಿಡುಗಡೆಯಾಗಿದ್ದು, ಅಪಾರ ಮೆಚ್ಚುಗೆ ಗಳಿಸಿದೆ.

ಕಬೀರ್‌ ಖಾನ್‌ ನಿರ್ದೇಶನದ ಚಿತ್ರದಲ್ಲಿ ಕ್ರಿಕೆಟಿಗ ಸಂದೀಪ್‌ ಪಾಟೀಲ್‌ ಪಾತ್ರವನ್ನು ಅವರ ಪುತ್ರ ಚಿರಾಗ್‌ ಪಾಟೀಲ್‌ ನಿರ್ವಹಿಸಿದ್ದಾರೆ.

ತಂದೆಯ ಪಾತ್ರದಲ್ಲಿ ನಟಿಸಿರುವುದಕ್ಕೆ ಚಿರಾಗ್‌ ಪಾಟೀಲ್‌ ಸಂತಸ ವ್ಯಕ್ತಪಡಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ತಮ್ಮತಂದೆಯಂತೆ ಬ್ಯಾಟ್ ಬೀಸುತ್ತಿರುವ ಚಿತ್ರವನ್ನು ಹಂಚಿಕೊಂಡಿರುವಚಿರಾಗ್ ಪಾಟೀಲ್, ‘ಬಾಲಕನಾಗಿದ್ದಾಗನಾನು ಅವರನ್ನು ಆರಾಧಿಸುತ್ತಿದ್ದೆ.ಈಗ ನಾನು ಅವರಂತೆ ಉತ್ತಮ ವ್ಯಕ್ತಿಯಾಗಲುಬಯಸುತ್ತೇನೆ. ಪರದೆಯ ಮೇಲೆ ನನ್ನ ಸೂಪರ್‌ ಹೀರೊನ ಪಾತ್ರದಲ್ಲಿ ಕಾಣಿಸಿಕೊಳ್ಳಲುನಾನು ಎಷ್ಟು ಅದೃಷ್ಟವಂತನಾಗಿರಬೇಕು? ಭಾರತ ತಂಡವನ್ನುಫೈನಲ್‌ಗೆ ಕೊಂಡೊಯ್ದ ವ್ಯಕ್ತಿ. ಮುಂಬೈ ಕಾ ಸ್ಯಾಂಡ್‌ಸ್ಟಾರ್ಮ್ಸಂದೀಪ್ ಪಾಟೀಲ್‘ ಎಂದು ಬರೆದುಕೊಂಡಿದ್ದಾರೆ.

ಕಪಿಲ್‌ ದೇವ್‌ ನಾಯಕತ್ವದಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ರೋಚಕ ಕಥೆಯನ್ನು ‘83‘ ಹೊಂದಿದೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಿತ್ರವು ತೆರೆಕಂಡಿದೆ.

ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಹಾಗೂ ಕಪಿಲ್‌ ದೇವ್‌ ಅವರ ಪತ್ನಿ ರೋಮಿ ದೇವ್ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.