ADVERTISEMENT

ಹೊಸ ವರ್ಷ ‘ಪ್ರಸ್ತ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 19:30 IST
Last Updated 28 ಡಿಸೆಂಬರ್ 2018, 19:30 IST

ಅಭಿಜ್ಞಾ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಪ್ರಸ್ತ’ ಚಿತ್ರವು ಹೊಸ ವರ್ಷದ ಆರಂಭದಲ್ಲೇ ಅಂದರೆ ಜನವರಿ ಮೊದಲ ವಾರದಲ್ಲಿ ಬಿಡುಗಡೆಯಾಗುತ್ತಿದೆ. ‌

‘ಗ್ರಾಮೀಣ ಪರಿಸರದಲ್ಲಿ ನಡೆಯುವ ತ್ರಿಕೋನ ಪ್ರೇಮ ಕಥಾನಕವನ್ನು ಹೊಂದಿರುವ ‘ಪ್ರಸ್ತ’ದಲ್ಲಿ ದ್ವಂದ್ವಾರ್ಥದ ಸಂಭಾಷಣೆ ಮತ್ತು ಹಾಟ್ ದೃಶ್ಯಗಳಿರುವ ಚಿತ್ರವಲ್ಲ. ಜನರಿಗೆ ಉತ್ತಮ ಸಂದೇಶ ಹೇಳುವ ಚಿತ್ರವಾಗಿದೆ’ ಎಂದು ರವಿ ಶತಭಿಷ್‌ ಹೇಳಿದ್ದಾರೆ. ಅವರು ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ, ಸಂಕಲನ, ಸಾಹಸ ನಿರ್ದೇಶನ ಜೊತೆ ನಿರ್ದೇಶನವನ್ನೂ ಮಾಡಿದ್ದಾರೆ.

ಮೋಹನ್ ಎಂ.ಎಸ್.ಎಸ್., ಸಂಗಮೇಶ್ ಛಾಯಾಗ್ರಹಣ, ಆಶ್ ಬೆಲ್ಲ್ ಸಂಗೀತ, ಶಿವರಾಜ್ ಗುಬ್ಬಿ, ಮೋಹನ್ ಛಾಯಾಂಕ ಸಾಹಿತ್ಯ ನೆರವು, ಹರೀಶ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ವಿಶ್, ವರ್ಷ, ಯಾದ್ವಿಕ್, ಸುಧಾಕರ್ ಕಾಳೇನಹಳ್ಳಿ, ಚಂದ್ರ, ಮಂಜುಳಾ, ಕಿಶೋರ್, ದೇವೇಗೌಡ, ಲೋಕೇಶ, ಮಧು, ಚಲುವರಾಜ್‌ ಮತ್ತಿತರರು ತಾರಾ ಬಳಗದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.