ADVERTISEMENT

ಕೋವಿಡ್‌ನಿಂದ ಗುಣಮುಖರಾದ ನಟ ಅಮಿತಾಬ್‌ ಬಚ್ಚನ್‌ ಆಸ್ಪತ್ರೆಯಿಂದ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಆಗಸ್ಟ್ 2020, 14:54 IST
Last Updated 2 ಆಗಸ್ಟ್ 2020, 14:54 IST
ನಟ ಅಮಿತಾಬ್‌ ಬಚ್ಚನ್‌
ನಟ ಅಮಿತಾಬ್‌ ಬಚ್ಚನ್‌   

ಮುಂಬೈ: ಕೋವಿಡ್‌ ದೃಡಪಟ್ಟಿದ್ದ ಹಿನ್ನೆಲೆಯಲ್ಲಿ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಅಮಿತಾಬ್ ಬಚ್ಚನ್ಭಾನುವಾರ ಬಿಡುಗಡೆಯಾಗಿದ್ದಾರೆ.

ಆಸ್ಪತ್ರೆಗೆ ದಾಖಲಾದ 23 ದಿನಗಳ ಬಳಿಕಅಮಿತಾಬ್‌ ಬಚ್ಚನ್‌ ಬಿಡುಗಡೆಯಾಗಿದ್ದು, ಅವರ ಪುತ್ರ ಅಭಿಷೇಕ್‌ ಬಚ್ಚನ್‌ಗೆ ಚಿಕಿತ್ಸೆ ಮುಂದುವರೆದಿದೆ.

77 ವರ್ಷದ ಅಮಿತಾಬ್‌ ಬಚ್ಚನ್‌ ಅವರಿಗೆ ಜುಲೈ 11 ರಂದು ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಆ ನಂತರ ಅವರ ಪುತ್ರ ಅಭಿಷೇಕ್‌ ಬಚ್ಚನ್‌, ಸೊಸೆ ಐಶ್ವರ್ಯಾ ರೈ ಮತ್ತು ಮೊಮ್ಮಗಳಿಗೂ ಕೋವಿಡ್‌ ಇರುವುದು ಬೆಳಕಿಗೆ ಬಂದಿತ್ತು.

ADVERTISEMENT

ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅಮಿತಾಬ್‌ ಅವರು ಮುಂಬೈನ ತಮ್ಮ ನಿವಾಸದಲ್ಲಿ ಕ್ವಾರಂಟೈನ್‌ ಆಗಿರುವುದಾಗಿ ಎಂದು ಟ್ವೀಟ್‌ ಮಾಡಿದ್ದಾರೆ.

'ನನ್ನ ಕೋವಿಡ್‌ ಪರೀಕ್ಷೆಯ ಫಲಿತಾಂಶ ನೆಗೆಟಿವ್‌ ಬಂದಿದೆ. ನನ್ನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ನಾನು ಮನೆಗೆ ಮರಳಿ ಹೋಮ್‌ ಕ್ವಾರಂಟೈನ್‌ ಆಗಿದ್ದೇನೆ. ದೇವರ ಕೃಪೆ, ಅಪ್ಪ-ಅಮ್ಮನ ಆಶೀರ್ವಾದ, ಆತ್ಮೀಯ ಸ್ನೇಹಿತರ ಪ್ರಾರ್ಥನೆ, ಅಭಿಮಾನಿಗಳ ಹರಕೆ ಮತ್ತು ನಾನಾವತಿ ಆಸ್ಪತ್ರೆಯ ಅತ್ಯುತ್ತಮ ಆರೈಕೆ ಮತ್ತು ಶುಶ್ರೂಷೆಯಿಂದ ನನಗೆ ಈ ದಿನವನ್ನು ಕಾಣಲು ಸಾಧ್ಯವಾಗಿದೆ' ಎಂದು ಅಮಿತಾಬ್‌ ಬಚ್ಚನ್‌ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.