ರೇಖಾಶ್ರೀ ‘ಪಾಲ್ಗುಣಿ’ ಚಿತ್ರದ ನಟಿ
ಇಂದು(ಆ.8) ನಾಗೇಶ್ ಕುಮಾರ್ ಯು.ಎಸ್ ಮತ್ತು ಜೆ.ಜೆ.ಶ್ರೀನಿವಾಸ್ ನಿರ್ಮಿಸಿ ಜೆ.ಜೆ.ಶ್ರೀನಿವಾಸ್ ನಿರ್ದೇಶಿಸಿರುವ ‘ಕಸ್ಟಡಿ’ ಹಾಗೂ ‘ಪಾಲ್ಗುಣಿ’ ಎಂಬ ಚಿತ್ರಗಳು ತೆರೆಕಂಡಿವೆ.
‘ಕಸ್ಟಡಿ’ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾದರೆ ‘ಪಾಲ್ಗುಣಿ’ ಮಂಡ್ಯದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿದ ಕಥಾಹಂದರ ಹೊಂದಿರುವ ಚಿತ್ರ.
ರೇಖಾಶ್ರೀ ‘ಪಾಲ್ಗುಣಿ’ಯಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ.
‘ಪಾಲ್ಗುಣಿ’ ನನ್ನ ಅಭಿನಯದ ನಾಲ್ಕನೇ ಚಿತ್ರ. ಈ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ‘ಪಾಲ್ಗುಣಿ’ ನನ್ನ ಪಾತ್ರದ ಹೆಸರು ಎಂದು ನಟಿ ರೇಖಾಶ್ರೀ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.