ADVERTISEMENT

ನಟ ವಿಕ್ಕಿ ಕೌಶಲ್ ಬೆನ್ನಿನ ಮೇಲೆ ಗಾಯದ ಬರೆ: ಇದರ ಅಸಲಿಯತ್ತೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಅಕ್ಟೋಬರ್ 2021, 6:58 IST
Last Updated 20 ಅಕ್ಟೋಬರ್ 2021, 6:58 IST
ವಿಕ್ಕಿ ಕೌಶಲ್
ವಿಕ್ಕಿ ಕೌಶಲ್   

ಮುಂಬೈ: ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರ ಬೆನ್ನಿನ ಮೇಲೆ ಗಾಯದ ಬರೆಗಳು ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಅಚ್ಚರಿಗೆ ಕಾರಣವಾಗಿದೆ.

ವಿಕ್ಕಿ ಅವರ ಮೇಲೆ ಯಾವುದೇ ರೀತಿಯ ಹಲ್ಲೆಯಾಗಿಲ್ಲ. ಆದರೂ ಅವರ ಬೆನ್ನಿನ ಮೇಲೆ ಹಲ್ಲೆ ಮಾಡಿದ ರೀತಿಯ ಗಾಯಗಳಾಗಿವೆ. ಅದು ಮೇಕಪ್ ಅಷ್ಟೆ. ಇದು ಮೇಕಪ್ ಕಲಾವಿದ ಪೀಟರ್ ಗೋರ್ಶೆನಿನ್ ಅವರ ಕೈಚಳಕವಾಗಿದೆ. ಇದನ್ನು ನೋಡಿದರೆ ನಿಜವಾಗಿ ಗಾಯಗಳಾಗಿರುವಂತೆ ಕಾಣುತ್ತದೆ. ಸದ್ಯ ಈ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವಿಕ್ಕಿ, ‘ಕಟ್ ಮಾಡದ ಕಟ್‌ಗಳು’ ಎಂದು ಬರೆದುಕೊಂಡಿದ್ದಾರೆ.

ಈ ರೀತಿ ಮೇಕಪ್ ಮಾಡಿರುವುದು ‘ಸರ್ದಾರ್ ಉಧಾಮ್ ಸಿಂಗ್’ ಚಿತ್ರಕ್ಕಾಗಿ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಉಧಾಮ್ ಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. 1919ರಲ್ಲಿ ಅಮೃತಸರದಲ್ಲಿ ಜಲಿಯನ್‌ ವಾಲಾಬಾಗ್ ಹತ್ಯಾಕಾಂಡಕ್ಕೆ ಸೇಡು ತೀರಿಸಿಕೊಳ್ಳಲು ಪಂಜಾಬ್‌ನ ಮಾಜಿ ಲೆಫ್ಟಿನೆಂಟ್ ಗವರ್ನರ್ ಮೈಕಲ್ ಒ'ಡ್ವೈಯರ್ ಅವರನ್ನು ಹತ್ಯೆ ಮಾಡಿದ್ದರು. ಈ ಹಿನ್ನೆಲೆ ಆರೋಪದ ಮೇಲೆ ಉಧಾಮ್ ಸಿಂಗ್‌ನನ್ನು ವಿಚಾರಣೆಗೆ ಒಳಪಡಿಸಿ, ಜುಲೈ 1940ರಲ್ಲಿ ಗಲ್ಲಿಗೇರಿಸಲಾಗಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ.

ADVERTISEMENT

ಚಿತ್ರದಲ್ಲಿ ನನ್ನ ಮುಖದ ಮೇಲೆ 13 ಹೊಲಿಗೆಗಳನ್ನು ಹಾಕಲಾಗಿದೆ. ಅದು ನಿಜವಾದ ಗಾಯವಾಗಿದ್ದು, ಚಿತ್ರೀಕರಣದ ಸಮಯದಲ್ಲಿ ನನ್ನ ಮುಖದ ಮೇಲೆ ಗಾಯವಾಗಿತ್ತು ಎಂದು ವಿಕ್ಕಿ ಹೇಳಿಕೊಂಡಿದ್ದರು. ಈ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಚಿತ್ರವನ್ನು ಶೂಜಿತ್ ಸಿರ್ಕಾರ್ ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.