ADVERTISEMENT

ಡಾಲಿ ಪಿಕ್ಚರ್ಸ್‌ನಿಂದ ವರ್ಷಕ್ಕೆ ಕನಿಷ್ಠ ಎರಡು ಸಿನಿಮಾ: ಧನಂಜಯ್‌

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 6:19 IST
Last Updated 24 ಆಗಸ್ಟ್ 2022, 6:19 IST
ಧನಂಜಯ್‌
ಧನಂಜಯ್‌   

ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ, ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವ ಕನಸೊಂದನ್ನು ಇಟ್ಟುಕೊಂಡು ‘ಜಯನಗರ 4th ಬ್ಲಾಕ್‌’ ಕಿರುಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟಿದ್ದ ನಟ ಧನಂಜಯ್‌, ಇದೀಗ ತನ್ನಂತೇ ಕನಸು ಕಾಣುತ್ತಿರುವ ಯುವಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ನಿರ್ಧರಿಸಿದ್ದಾರೆ.

ಈಗಾಗಲೇ ತನ್ನ ಡಾಲಿ ಪಿಕ್ಚರ್ಸ್‌ ಸಂಸ್ಥೆಯಡಿ ‘ಬಡವ ರಾಸ್ಕಲ್‌’ ಹಾಗೂ ‘ಹೆಡ್‌ಬುಷ್‌’ ಸಿನಿಮಾ ನಿರ್ಮಾಣ ಮಾಡಿ ಅನುಭವ ಪಡೆದುಕೊಂಡಿರುವ ಧನಂಜಯ್‌, ತಮ್ಮ ಜನ್ಮದಿನದಂದು ಹೊಸ ಘೋಷಣೆಯೊಂದನ್ನು ಮಾಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಡಾಲಿ ಪಿಕ್ಚರ್ಸ್‌ ಸಂಸ್ಥೆ, ‘ಹೊಸಬರ ಆರಂಭದ ಕಲ್ಲುಮುಳ್ಳಿನ ದಾರಿಯನ್ನು ಹೇಗೆ ಸುಲಭವಾಗಿಸಬಹುದೆಂದು ಸ್ವತಃ ಆ ದಾರಿಯಲ್ಲಿ ನಡೆದುಬಂದಿರುವ ‘ಡಾಲಿ’ ಧನಂಜಯ್‌ ಅವರ ಆಲೋಚನೆಯೇ ಈ ಘೋಷಣೆಗೆ ಹಿನ್ನೆಲೆ. ಇನ್ನು ಮುಂದೆ ಪ್ರತಿ ವರ್ಷ ಡಾಲಿ ಪಿಕ್ಚರ್ಸ್‌ ವತಿಯಿಂದ ಕನಿಷ್ಠ ಎರಡು ಸಿನಿಮಾಗಳನ್ನಾದರೂ ನಿರ್ಮಾಣ ಮಾಡುವುದಾಗಿ, ಇದರಲ್ಲಿ ಮುಖ್ಯವಾಗಿ ಒಂದು ಸಿನಿಮಾವನ್ನು ಕೇವಲ ಹೊಸ ಪ್ರತಿಭೆಗಳಿಗೆ ಮೀಸಲಿಡುವುದಾಗಿ ಘೋಷಿಸುತ್ತೇವೆ. ಈ ಹೊಸ ಪ್ರಯತ್ನಕ್ಕೆ ಹಾರೈಕೆಯಿರಲಿ’ ಎಂದು ಉಲ್ಲೇಖಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.