ADVERTISEMENT

‘ಡಾಲಿ ಪಿಕ್ಚರ್ಸ್’ ನಿರ್ಮಾಣದ ‘ಜೆಸಿ’ ಸಿನಿಮಾ ಫೆಬ್ರುವರಿ 6ಕ್ಕೆ ತೆರೆಗೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 0:16 IST
Last Updated 21 ಜನವರಿ 2026, 0:16 IST
ಭಾವನ ರೆಡ್ಡಿ
ಭಾವನ ರೆಡ್ಡಿ   

ನಟ ಡಾಲಿ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ ನಿರ್ಮಾಣದ ‘ಜೆಸಿ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಚೇತನ್ ಜೈರಾಮ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ಫೆ.6ರಂದು ತೆರೆಗೆ ಬರಲಿದೆ. 

‘ಮ್ಯಾಡಿಯ ಮ್ಯಾಡ್‌ನೆಸ್‌ ಜೊತೆಗೆ ಜೈಲಿನ ಡಾರ್ಕ್‌ನೆಸ್‌ ಪಯಣ’ ಎಂದು ಚಿತ್ರದ ಕುರಿತು ಡಾಲಿ ಧನಂಜಯ ಹೇಳಿದ್ದಾರೆ. ಯಾವುದೋ ಕಾರಣಕ್ಕೆ ಜೈಲು ಸೇರುವ ಅಮಾಯಕ ಕೈದಿಯೊಬ್ಬನಿಗೆ ಉಳಿದ ಕೈದಿಗಳು ನೀಡುವ ಹಿಂಸೆ, ಜೈಲಿನೊಳಗೆ ನಡೆಯುವ ರಾಜಕೀಯ, ಜೈಲಿನಿಂದ ಹೊರಬಂದ ನಂತರ ಆತನ ಬದುಕು ಚಿತ್ರದ ಒಟ್ಟಾರೆ ಕಥೆ ಎಂಬುದು ಟ್ರೇಲರ್‌ನಿಂದ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. 

ಸೂರ್ಯ ಪ್ರಖ್ಯಾತ್‌ಗೆ ಜೋಡಿಯಾಗಿ ಭಾವನ ರೆಡ್ಡಿ ನಟಿಸಿದ್ದಾರೆ. ‘ಜೆಸಿ’ ಎಂದರೆ ಜುಡಿಷಿಯಲ್ ಕಸ್ಟಡಿ. ಜೈಲಿಂದ ಹೊರಗೆ ಬಂದಿರುವ ಯುವಕನ ಕಥೆ ಈ ಸಿನಿಮಾದಲ್ಲಿ ಇರಲಿದೆ ಎಂದಿದೆ ಚಿತ್ರತಂಡ. ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ಆ್ಯಕ್ಷನ್‌, ಮಾಸ್ ಚಿತ್ರಕ್ಕೆ ಕಾರ್ತಿಕ್ ಛಾಯಾಚಿತ್ರಗ್ರಹಣ, ರೋಹಿತ್ ಸೋವರ್ ಸಂಗೀತ ನಿರ್ದೇಶನವಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.