ADVERTISEMENT

Video: ಅಗಲಿದ ಅಪ್ಪುಗೆ ಡೇವಿಡ್ ವಾರ್ನರ್ ವಿಶೇಷ ಶ್ರದ್ಧಾಂಜಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2021, 10:45 IST
Last Updated 6 ಡಿಸೆಂಬರ್ 2021, 10:45 IST
ಪುನೀತ್ ರಾಜ್‌ಕುಮಾರ್ ಹಾಗೂ ಡೇವಿಡ್ ವಾರ್ನರ್
ಪುನೀತ್ ರಾಜ್‌ಕುಮಾರ್ ಹಾಗೂ ಡೇವಿಡ್ ವಾರ್ನರ್   

ಬೆಂಗಳೂರು: ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ ಒಂದು ತಿಂಗಳು ಕಳೆದರೂ ಅಭಿಮಾನಿಗಳ ದುಃಖ ಇನ್ನೂ ಕಡಿಮೆ ಆಗಿಲ್ಲ. ಕೇವಲ ಕನ್ನಡಿಗರಷ್ಟೇ ಅಲ್ಲದೇ ದೇಶ ವಿದೇಶದ ಗಣ್ಯರು ಅಪ್ಪು ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಇದೀಗ ಆಸ್ಟೇಲಿಯಾದ ಸ್ಫೋಟಕ ಬ್ಯಾಟ್ಸಮನ್, ಐಪಿಎಲ್ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಅವರು ಅಪ್ಪುವನ್ನು ವಿಶೇಷವಾಗಿ ಸ್ಮರಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ‘ರಾಜಕುಮಾರ’ ಚಿತ್ರದ ಗೊಂಬೆ ಹೇಳುತೈತೆ ಹಾಡಿಗೆ ಫೇಸ್ ಆ್ಯಪ್ ಮೂಲಕ ಮುಖ ಬದಲಿಸಿ ಅಪ್ಪುಗೆ ವಿಶಿಷ್ಟವಾಗಿ ಶೃದ್ದಾಂಜಲಿ ಸಲ್ಲಿಸಿದ್ದಾರೆ. ವಿಡಿಯೊ ಹಂಚಿಕೊಂಡು ‘ರೆಸ್ಪೆಕ್ಟ್’ ಎಂದು ಬರೆದುಕೊಂಡಿದ್ದಾರೆ.

ಡೇವಿಡ್ ವಾರ್ನರ್ ಅವರು ಭಾರತದಲ್ಲಿ ಐಪಿಎಲ್‌ ಟೂರ್ನಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಲ್ಲದೇ, ಇಲ್ಲಿನ ಸಂಸ್ಕೃತಿ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.