ADVERTISEMENT

Kannada Movie: ‘ಅಮೆಜಾನ್‌ ಪ್ರೈಂ’ನಲ್ಲಿ ‘ಪಾರು ಪಾರ್ವತಿ’

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 23:30 IST
Last Updated 8 ಏಪ್ರಿಲ್ 2025, 23:30 IST
ಪಾರು ಪಾರ್ವತಿ 
ಪಾರು ಪಾರ್ವತಿ    

‘ಬಿಗ್‌ಬಾಸ್‌’ ಖ್ಯಾತಿಯ ದೀಪಿಕಾ ದಾಸ್ ಅಭಿನಯದ ‘ಪಾರು ಪಾರ್ವತಿ’ ಸಿನಿಮಾ ಒಟಿಟಿ ವೇದಿಕೆ ಪ್ರವೇಶಿಸಿದೆ. ಅಮೆಜಾನ್‌ ಪ್ರೈಂನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. 

ರೋಹಿತ್‌ ಕೀರ್ತಿ ನಿರ್ದೇಶನದ ಈ ಚಿತ್ರವನ್ನು ಎಯಿಟೀನ್‌ ಥರ್ಟೀ ಸಿಕ್ಸ್‌ ಪಿಕ್ಚರ್ಸ್‌ ಲಾಂಛನದಡಿ ಪಿ.ಬಿ.ಪ್ರೇಂನಾಥ್‌ ನಿರ್ಮಿಸಿದ್ದಾರೆ. ತಿಳಿಯಾದ ಹಾಸ್ಯ, ಜೀವನ ಪಾಠ, ಯುವಜನತೆಗೆ ಸಂದೇಶ ಹೊಂದಿರುವ ಭಿನ್ನ ಶೈಲಿಯ ಈ ಸಿನಿಮಾ ಜ.31ರಂದು ಬಿಡುಗಡೆಯಾಗಿತ್ತು. ‘ಪಾಯಲ್‌’ ಎಂಬ ಪಾತ್ರದಲ್ಲಿ ದೀಪಿಕಾ ದಾಸ್, ಪೂನಂ ಸರ್‌ನಾಯಕ್‌ ‘ಪಾರ್ವತಿ’ ಎಂಬ ಪಾತ್ರದಲ್ಲಿ ಹಾಗೂ ‘ಮಿದುನ್‌’ ಎಂಬ ಪಾತ್ರದಲ್ಲಿ ಫವಾಜ್ ಅಶ್ರಫ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಈ ಚಿತ್ರವು ಅಡ್ವೆಂಚರ್‌ ಕಾಮಿಡಿ ಜಾನರ್‌ನಲ್ಲಿದೆ. ಅಬಿನ್‌ ರಾಜೇಶ್‌ ಛಾಯಾಚಿತ್ರಗ್ರಹಣ ಹಾಗೂ ಆರ್‌.ಹರಿ ಸಂಗೀತ ನೀಡಿರುವ ಈ ಚಿತ್ರದಲ್ಲಿ ಟ್ರಾವೆಲ್‌ ಕಥೆಯಿದ್ದು, ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರಾಖಂಡ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.