ADVERTISEMENT

ಮನಸ್ಸು ಕೆಲಸ ಮಾಡುತ್ತಿರಲಿಲ್ಲ: ಕೋವಿಡ್‌ ವಿರುದ್ಧದ ಹೋರಾಟದ ಬಗ್ಗೆ ದೀಪಿಕಾ ಮಾತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2022, 5:51 IST
Last Updated 8 ಜನವರಿ 2022, 5:51 IST
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ   

ಎರಡನೇ ಅಲೆಯಲ್ಲಿ ಕೋವಿಡ್ ಸೋಂಕಿಗೆ ಒಳಗಾದ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳಲ್ಲಿ ದೀಪಿಕಾ ಪಡುಕೋಣೆ ಸಹ ಒಬ್ಬರು. ದೀಪಿಕಾರ ತಂದೆ ಪ್ರಕಾಶ್ ಪಡುಕೋಣೆ, ತಾಯಿ ಉಜ್ಜಲಾ ಮತ್ತು ಸಹೋದರಿ ಅನಿಶಾ ಅವರು ಕೋವಿಡ್‌ಗೆ ತುತ್ತಾಗಿದ್ದರು. 2021ರ ಏಪ್ರಿಲ್‌ನಲ್ಲಿ ಇವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು.

'ಫಿಲ್ಮ್ ಕಂಪ್ಯಾನಿಯನ್' ಜೊತೆಗಿನ ಇತ್ತೀಚಿನ ಸಂದರ್ಶನದಲ್ಲಿ ಕೋವಿಡ್‌ ವಿರುದ್ಧದ ಸಂಘರ್ಷದ ಕುರಿತು ದೀಪಿಕಾ ಮಾತನಾಡಿದ್ದಾರೆ.

‘ಕೆಲ ದಿನಗಳಲ್ಲಿ ಕೋವಿಡ್‌ನಿಂದ ಚೇತರಿಸಿಕೊಳ್ಳುವಲ್ಲಿ ನಾನು ಯಶಸ್ವಿಯಾಗಿದ್ದೆ. ಆದರೆ, ಕೆಲಸವನ್ನು ಪುನರಾರಂಭಿಸುವ ಮೊದಲು ಎರಡು ತಿಂಗಳು ವಿರಾಮವನ್ನು ತೆಗೆದುಕೊಂಡೆ. ಕಾರಣ, ಮನಸ್ಸು ಕೆಲಸ ಮಾಡುವುದನ್ನೇ ನಿಲ್ಲಿಸಿತ್ತು. ಇದು ನನಗೆ ತುಂಬಾ ಕಷ್ಟಕರವಾದ ಹಂತವಾಗಿತ್ತು’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಕೋವಿಡ್‌ನಿಂದ ಚೇತರಿಸಿಕೊಂಡ ನಂತರ ನನ್ನ ಬದುಕು ಬದಲಾದಂತೆ ಭಾಸವಾಯಿತು. ಏಕೆಂದರೆ ದೈಹಿಕವಾಗಿ ನನ್ನನ್ನು ನಾನೇ ಗುರುತಿಸಿಕೊಳ್ಳಲು ಆಗಲಿಲ್ಲ. ನನಗೆ ನೀಡಿದ ಔಷಧಿಗಳು, ಸ್ಟಿರಾಯ್ಡ್‌ಗಳು ದೇಹದ ಮೇಲೆ ಪರಿಣಾಮ ಬೀರಿದ್ದವು ಎಂಬುದಾಗಿ ನಾನು ಭಾವಿಸುತ್ತೇನೆ. ಕೋವಿಡ್ ವಿಲಕ್ಷಣವಾದ ಸೋಂಕು. ಅದು ನಮ್ಮ ದೇಹ ಮತ್ತು ಮನಸ್ಸುಗಳಲ್ಲಿ ಬದಲಾವಣೆ ತರುತ್ತದೆ’ ಎಂದು ದೀಪಿಕಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.