ADVERTISEMENT

ರಣವೀರ್ ಜೊತೆಗಿನ ಸಂಬಂಧ ಮುಕ್ತವಾಗಿಡಲು ಬಯಸಿದ್ದೆ: ದೀಪಿಕಾ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 12:14 IST
Last Updated 5 ಜನವರಿ 2021, 12:14 IST
ದೀಪಿಕಾ ಪಡುಕೋಣೆ: ಎಎಫ್‌ಪಿ ಚಿತ್ರ
ದೀಪಿಕಾ ಪಡುಕೋಣೆ: ಎಎಫ್‌ಪಿ ಚಿತ್ರ   

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಂದು 36ನೇ ವಸಂತಕ್ಕೆ ಕಾಲಿರಿಸಿದ್ದಾರೆ. ನೇರ ನುಡಿ ಮೂಲಕ ಆಗಾಗ್ಗೆ ಸುದ್ದಿ ಮಾಡುವ ದೀಪಿಕಾ ಬರ್ತ್‌ ಡೇ ದಿನದಂದು ತಮ್ಮ ಪತಿ ರಣವೀರ್ ಸಿಂಗ್ ಜೊತೆ ಪ್ರೇಮಾಂಕುವಾದ ಸಂಗತಿಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಫಿಲ್ಮ್ ಫೇರ್ ಸಂದರ್ಶನದಲ್ಲಿ ಮಾತನಾಡಿರುವ ದೀಪಿಕಾ, ನಾನು ಮೊದಲ ಬಾರಿಗೆ ರಣವೀರ್ ಸಿಂಗ್ ಭೇಟಿಯಾದಾಗ ಗಂಭೀರ ವಿಶ್ವಾಸದ ಸಮಸ್ಯೆಯಿಂದ ಬಳಲುತ್ತಿದ್ದೆ. ರಣವೀರ್ ಇಷ್ಟವಾದರೂ ಸಂಪೂರ್ಣವಾಗಿ ಅವರ ಜೊತೆ ಸ್ನೇಹ ಮುಂದುವರಿಸಲು ನನ್ನ ಮನಸ್ಸು ಒಪ್ಪಿರಲಿಲ್ಲ. ಇದು ಅವರ ಸಮಸ್ಯೆಯಲ್ಲ, ಮತ್ತೊಂದು ಸಂಬಂಧಕ್ಕೆ ನಾನು ಸಿದ್ಧಳಾಗಿದ್ದೇನೆಯೇ ಎಂಬ ಪ್ರಶ್ನೆ ಕಾಡುತ್ತಿತ್ತು. ಏಕೆಂದರೆ, ಇದಕ್ಕೂ ಮುನ್ನ ನಾನು ಹಲವು ರಿಲೇಶನ್‌ಶಿಪ್‌ನಲ್ಲಿದ್ದೆ, ಅವುಗಳಲ್ಲೆಲ್ಲ ನನ್ನ ವಿಶ್ವಾಸ ಮುರಿದು ಬಿದ್ದಿತ್ತು ಎಂದಿದ್ದಾರೆ.

ರಣವೀರ್ ಭೇಟಿಯಾದಾಗ ನಾನು ತುಂಬಾ ದಣಿದಿದ್ದೆ., ‘ರಣವೀರ್ ಮತ್ತು ನಾನು 2012 ರಲ್ಲಿ ಭೇಟಿಯಾದಾಗ, ನಮ್ಮ ನಡುವೆ ಏನೋ ಸಂಬಂಧವಿದೆ ಎಂದು ನನಗೆ ತಿಳಿದಿದೆ. ನಾನು ನಿನ್ನನ್ನು ನಿಜವಾಗಿಯೂ ಇಷ್ಟಪಡುತ್ತೇನೆ. ಆದರೆ, ಅದನ್ನು ಮುಕ್ತವಾಗಿಡಲು ನಾನು ಬಯಸುತ್ತೇನೆ. ನಾನು ಈ ಸಂಬಂಧಕ್ಕೆ ಬದ್ಧಳಾಗಿರಲು ಬಯಸುವುದಿಲ್ಲ. ನಾನು ಬೇರೊಬ್ಬ ಹುಡುಗನತ್ತ ಆಕರ್ಷಣೆಗೊಳಗಾದರೆ, ನಾನು ಅದರಲ್ಲಿ ಮುಂದುವರೆಯುತ್ಥೇನೆ , ’ ಎಂದು ಹೇಳಿದ್ದಾಗಿ ದೀಪಿಕಾ ಹೇಳಿದ್ದಾರೆ.

ADVERTISEMENT

ಸಂದರ್ಶನದಲ್ಲಿ ರಣವೀರ್ ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ನನ್ನ ಜೀವನದಲ್ಲಿ ಅದೊಂದು ಹಂತವಿತ್ತು. ಯಾವುದೇ ಸಂಬಂಧವೂ ಗಟ್ಟಿಯಾಗಿರಲಿಲ್ಲ. ಯಾವುದೇ ಸಂಬಂಧ ಮುರಿದುಕೊಳ್ಳುವ ಮನಸ್ಥಿನಲ್ಲಿದ್ದೆ. ಈಗ ಆಗಿಲ್ಲ. ನಾನು ವಿಕಸನಗೊಂಡಿದ್ದೇನೆ. ಜೈವಿಕ ಗಡಿಯಾರ ಬದಲಾಗಿದೆ. ನಾನೊಬ್ಬ ಕುಟುಂಬದ ವ್ಯಕ್ತಿಯಾಗಿರಲು ಬಯಸುತ್ತೇನೆ. ಮಕ್ಕಳನ್ನು ಪ್ರೀತಿಸುತ್ತೇನೆ ಎಂದಿದ್ದಾರೆ..

ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ದೀಪಿಕಾ ಪಡುಕೋಣೆ, ನಿರ್ದೇಶಕ ನಾಗ್ ಅಶ್ವಿನ್ ಅವರ ಮುಂದಿನ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. 'ಆಂತರಿಕ ದೇವರು' ಎಂಬ ಪರಿಕಲ್ಪನೆಯ ಸುತ್ತ ಈ ಕಥೆ ಸುತ್ತಲಿದ್ದು, ಈ ಹಿಂದಿನ ಟಾಲಿವುಡ್ ಸೂಪರ್ ಹಿಟ್ ಚಿತ್ರ ಜಗದೇಕ ವೀರುಡು ಅತಿಲೋಕ ಸುಂದರಿಯೊಂದಿಗೆ ಸ್ವಲ್ಪ ಹೋಲುತ್ತದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.