ದೀಪಿಕಾ ಪಡುಕೋಣೆ
ಮುಂಬೈ: ಕಠಿಣ ಸಂದರ್ಭಗಳಲ್ಲಿ ನಾನು ಯಾವಾಗಲೂ ನನ್ನ ಅಂತರಾಳದ ಮಾತನ್ನು ಕೇಳುತ್ತೇನೆ, ನನ್ನ ನಂಬಿಕೆಗೆ ನಾನು ಬದ್ಧವಾಗಿದ್ದೇನೆ ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.
ವೋಗ್ ಅರೇಬಿಯಾ ಸಂದರ್ಶನದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಸತ್ಯವಂತರಾಗಿರುವುದು ಮುಖ್ಯ. ಕಠಿಣ ಸಂದರ್ಭಗಳು ಎದುರಾದಾಗ, ನಾನು ನನ್ನ ಮನದಾಳದ ಮಾತನ್ನು ಕೇಳುತ್ತೇನೆ. ಹೃದಯದ ಮಾತನ್ನು ಆಧರಿಸಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ
ಸಂದೀಪ್ ರೆಡ್ಡಿ ವಂಗಾ ಅವರ ‘ಸ್ಪಿರಿಟ್’ ಚಿತ್ರದಿಂದ ದೀಪಿಕಾ ಅವರು ಹೊರನಡೆದಿದ್ದಾರೆ ಎನ್ನುವ ವರದಿಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಅಲ್ಲದೆ ದೀಪಿಕಾ ಅವರ ಹೆಸರನ್ನು ಉಲ್ಲೇಖಿಸದೆ ವಂಗಾ ಅವರು ಪೋಸ್ಟ್ ಹಂಚಿಕೊಂಡು, ತನ್ನ ಚಿತ್ರದ ಕಥೆ ಲೀಕ್ ಆಗಿದೆ ಇದೇನಾ ಫೆಮಿನಿಸಂ ಅಂದರೆ ಎಂದು ಬರೆದುಕೊಂಡಿದ್ದರು.
ಸ್ಪಿರಿಟ್ ಚಿತ್ರದಲ್ಲಿ ಪ್ರಭಾಸ್ ಜತೆ ನಟಿ ತೃಪ್ತಿ ದಿಮ್ರಿ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಕಳೆದ ವಾರ ಚಿತ್ರತಂಡ ಘೋಷಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.