ADVERTISEMENT

ಡಿಸೆಂಬರ್ 25ಕ್ಕೆ ‘ದೇವದಾಸಿಯರು’ ಸಿನಿಮಾ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 5:26 IST
Last Updated 30 ನವೆಂಬರ್ 2020, 5:26 IST

ದಾವಣಗೆರೆ: ಮಹಿಳಾ ಪ್ರಧಾನ ‘ದೇವದಾಸಿಯರು’ ಚಲನಚಿತ್ರ ಡಿಸೆಂಬರ್ 25 ಇಲ್ಲವೇ ಜನವರಿ ಮೊದಲ ವಾರ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ದೇಶಕ ಸ್ವಾತಿ ಅಂಬರೀಶ್ ಹೇಳಿದರು.

‌‘ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಮಾರ್ಚ್ ತಿಂಗಳಿ ನಲ್ಲಿಯೇ ಬಿಡುಗಡೆ ಯಾಗಬೇಕಿತ್ತು. ಆದರೆ ಲಾಕ್‌ಡೌನ್ ಕಾರಣ ವಿಳಂಬವಾಯಿತು. ಉತ್ತರ ಕರ್ನಾಟಕದ ಭಾಗಗಳಲ್ಲಿ ಥಿಯೇಟರ್‌ಗಳು ಇನ್ನೂ ಓಪನ್ ಆಗಿಲ್ಲ. ಆದ್ದರಿಂದ ಚಿತ್ರಮಂದಿರಗಳು ತೆರೆದ ಬಳಿಕ 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘₹80 ಲಕ್ಷ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಿದ್ದು, ಬೆಂಗಳೂರು ಹಾಗೂ ಉಚ್ಚಂಗಿದುರ್ಗಗಳ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಮಹಿಳೆಯರಿಗೆ ಮಣಿಕಟ್ಟು ಕಟ್ಟುವ ಮೂಲಕ ದೇವದಾಸಿಯರನ್ನಾಗಿ ಮಾಡುವುದರ ಕಥಾ ವಸ್ತು ಇದೆ. ಒಂದು ಸಾಮಾಜಿಕ ಸಂದೇಶವಿದೆ’ ಎಂದು ಹೇಳಿದರು.

ADVERTISEMENT

ಚಿತ್ರದ ನಾಯಕಿ ಸಂಜನಾ ನಾಯ್ಡು ಮಾತನಾಡಿ, ‘ಚಿತ್ರದಲ್ಲಿ ನನ್ನದು ದ್ವಿಪಾತ್ರ. ಹಳ್ಳಿಯ ಅವಿದ್ಯಾವಂತ ಹುಡುಗಿ. ಮತ್ತೊಂದು ವಿದ್ಯಾವಂತೆ ಎರಡೂ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಅವಿದ್ಯಾವಂತ ಹುಡುಗಿಯನ್ನು ದೇವದಾಸಿ ಪದ್ಧತಿಗೆ ಹೇಗೆ ದೂಡುತ್ತಾರೆ ಎಂಬ ಅಂಶ ಚಿತ್ರದಲ್ಲಿದೆ. ಚಿತ್ರ ಎಲ್ಲ ರಿಗೂ ಇಷ್ಟವಾಗುವ ಹಾಗೆ ಇದೆ’ ಎಂದರು.

ಸಹ ನಟಿ ಹೇಮಾ, ಕನ್ನಡ ಚಳವಳಿಯ ಟಿ. ಶಿವಕುಮಾರ್, ಶಿಲ್ಪ ಕಲಾವಿದ ಟಿ. ಸೋಮೇಶ್, ಅಖಿಲ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.