ADVERTISEMENT

ನವ್ಯನಾಯರ್ ಅನುಭವಕಥನ ‘ಧನ್ಯವೀಣಾ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 7:05 IST
Last Updated 10 ಜನವರಿ 2021, 7:05 IST
ಮಲೆಯಾಳಂ ನಟಿ ನವ್ಯಾ ನಾಯರ್‌ ಅವರ ಅನುಭವ ಕಥನ ‘ಧನ್ಯವೀಣಾ’ ಬಿಡುಗಡೆ ಶನಿವಾರ ನಡೆಯಿತು.
ಮಲೆಯಾಳಂ ನಟಿ ನವ್ಯಾ ನಾಯರ್‌ ಅವರ ಅನುಭವ ಕಥನ ‘ಧನ್ಯವೀಣಾ’ ಬಿಡುಗಡೆ ಶನಿವಾರ ನಡೆಯಿತು.   

ಮಲೆಯಾಳಂನ ಖ್ಯಾತ ನಟಿ ನವ್ಯಾ ನಾಯರ್‌ ಅವರ ಅನುಭವ ಕಥನ ‘ಧನ್ಯವೀಣಾ’ (ಮಲೆಯಾಳಂ ಮೂಲಕೃತಿ: ನವ್ಯ ರಸಂಗಳ್‌) ಶನಿವಾರ ಬಿಡುಗಡೆಗೊಂಡಿತು.

14 ಚಿತ್ರಗಳಲ್ಲಿ ಅಭಿನಯಿಸಿರುವ ನವ್ಯಾ ಅವರು ಈ ಕೃತಿಯಲ್ಲಿ ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ. ಪ್ರಾಧ್ಯಾಪಕಿ ಜಾನೆಟ್‌ ಐ.ಜೆ. ಅವರು ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಜಿ.ಎಸ್‌. ಯುಧಿಷ್ಠಿರ ಸಂಯೋಜಿಸಿದ್ದಾರೆ.

ಪತ್ರಕರ್ತೆ ಭಾವನಾ ಬೆಳಗೆರೆ ಪುಸ್ತಕ ಬಿಡುಗಡೆ ಮಾಡಿದರು. ಲೇಖಕಿ ನವ್ಯಾ ನಾಯರ್‌, ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯಾಧ್ಯಕ್ಷ ಪ್ರಶಾಂತ್‌ ಕಲ್ಲೂರು, ನಟ ಸಂಚಾರಿ ವಿಜಯ್‌, ಜಾನೆಟ್‌ ಐ.ಜೆ., ಯುಧಿಷ್ಠಿರ ಸಮಾರಂಭದಲ್ಲಿ ಇದ್ದರು.

ADVERTISEMENT

ನವ್ಯಾ ಮಾತನಾಡಿ, ‘ಕನ್ನಡದಲ್ಲಿ ನನ್ನ ಮೊದಲ ಚಿತ್ರ ‘ಗಜ’. ಭಾಗ್ಯದ ಬಳೆಗಾರ ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ಹಾಗೂ ‘ದೃಶ್ಯ’ ಚಿತ್ರದಲ್ಲಿ ರವಿಚಂದ್ರನ್‌ ಜೊತೆ ನಟಿಸಿದ್ದೆ. ಇಲ್ಲಿ ಒಳ್ಳೆಯ ವಾತಾವರಣ ಇದೆ. ಒಳ್ಳೆಯ ಅವಕಾಶ ಬಂದರೆ ಕನ್ನಡದಲ್ಲಿ ನಟಿಸಲು ನಾನು ಉತ್ಸುಕಳಾಗಿದ್ದೇನೆ. ಕೃತಿಯಲ್ಲಿ ನನ್ನ ಕಲಾ ಬದುಕನ್ನು ತೆರೆದಿಟ್ಟಿದ್ದೇನೆ. ಮಲೆಯಾಳಂನಲ್ಲಿ ಈ ಕೃತಿಯನ್ನು ಮಂಜು ವಾರಿಯರ್‌ ಬಿಡುಗಡೆ ಮಾಡಿದ್ದರು. ಕೆಲವೊಂದು ಪದಗಳನ್ನು ಭಾಷಾಂತರಿಸುವುದು ಬಹಳ ಕಷ್ಟ. ಅದನ್ನು ಇಲ್ಲಿ ಜಾನೆಟ್‌ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ’ ಎಂದರು.

‘8 ವರ್ಷಗಳ ನಂತರ ಮತ್ತೆ ನಾನು ಬಣ್ಣ ಹಚ್ಚಿದ್ದೇನೆ. ಪ್ರಕಾಶ್ ಅವರ ನಿರ್ದೇಶನದಲ್ಲಿ ‘ಉರುಪಿ’ ಹೆಸರಿನ ಚಿತ್ರ ಮೂಡಿಬರುತ್ತಿದೆ. ನಾಯಕಿ ಪ್ರಧಾನದ ಕಥೆ ಇದು. ಈಗ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ನನ್ನ ಸಾಧನೆಯ ಹಿಂದೆ ತಂದೆ ತಾಯಿ ಇದ್ದಾರೆ. ಈ ಕೃತಿಯ ಆಶಯ ಓದುಗನಿಗೆ ತಲುಪಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.