ADVERTISEMENT

‘ದಿಲ್‌ ಮಾರ್‌‘ಗೆ ಶ್ರೀಮುರಳಿ ಸಾಥ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 23:28 IST
Last Updated 28 ಸೆಪ್ಟೆಂಬರ್ 2025, 23:28 IST
ರಾಮ್‌
ರಾಮ್‌   

ಚಂದ್ರಮೌಳಿ ನಿರ್ದೇಶನದ ‘ದಿಲ್‌ ಮಾರ್’ ಚಿತ್ರದ ಮೊದಲ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಶ್ರೀಮುರಳಿ ಟೀಸರ್‌ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.

‘ನಾನು ‘ಕೆಜಿಎಫ್‌’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದೆ. ಇದು ನನ್ನ ನಿರ್ದೇಶನದ ಚೊಚ್ಚಲ ಸಿನಿಮಾ. ಚಿತ್ರದ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಬಳಿಕ ಎಲ್ಲರೂ ಬಿಡುಗಡೆ ಯಾವಾಗ ಎಂದು ಕೇಳುತ್ತಿದ್ದರು. ಕಾರಣದಿಂದ ಸ್ವಲ್ಪ ತಡವಾಗಿದೆ. ಇನ್ಮೇಲೆ ಯಾವುದೇ ಸಮಸ್ಯೆ ಇಲ್ಲ. ಹಾಡು ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಶುರು ಮಾಡಿದ್ದೇವೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಆ್ಯಕ್ಷನ್ ಜೊತೆಗೆ ಎಮೋಷನ್, ಲವ್ ಇದೆ’ ಎಂದರು ನಿರ್ದೇಶಕ.

‘ನೀನಿಲ್ಲದೇ’ ಎಂಬ ಹಾಡಿಗೆ ಕೇಶವ್ ವಿ.ಜಿ ಸಾಹಿತ್ಯ ಬರೆದಿದ್ದು, ಶರತ್ ಸಂತೋಷ್ ಧ್ವನಿಯಾಗಿದ್ದಾರೆ. ರದನ್‌ ಸಂಗೀತವಿದೆ. ರಾಮ್‌ ಚಿತ್ರದ ನಾಯಕ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ತೆಲುಗಿನ ನಟಿ ಡಿಂಪಲ್ ಹಯಾತಿ ಹಾಗೂ ಆದಿತಿ ಪ್ರಭುದೇವ ನಟಿಸಿದ್ದಾರೆ. ಸಾಯಿ ಕುಮಾರ್, ಶರತ್ ಲೋಹಿತಾಶ್ವ, ಅಶೋಕ್ ಮುಂತಾದವರು ಚಿತ್ರದಲ್ಲಿದ್ದಾರೆ.

ADVERTISEMENT

ತನ್ವಿಕ್ ಅವರ ಛಾಯಾಚಿತ್ರಗ್ರಹಣ, ಶಶಾಂಕ್ ಮುರುಳಿಧರನ್ ಸಂಕಲನ ಚಿತ್ರಕ್ಕಿದೆ. ಚಿತ್ರವನ್ನು ನಾಗರಾಜ್ ಭದ್ರಾವತಿ ಹಾಗೂ ಮಹೇಶ್ ಕೆ. ನಿರ್ಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.