ADVERTISEMENT

ತಿಂಗಳಾಂತ್ಯದಲ್ಲಿ ಬರಲಿದೆ ನಿರ್ದೇಶಕ ಎಂ.ಡಿ. ಶ್ರೀಧರ್‌ ಅವರ ‘ಜಂಬೂಸರ್ಕಸ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 18:45 IST
Last Updated 5 ಸೆಪ್ಟೆಂಬರ್ 2024, 18:45 IST
ಅಂಜಲಿ ಎಸ್.ಅನೀಶ್
ಅಂಜಲಿ ಎಸ್.ಅನೀಶ್   

‘ಬುಲ್ ಬುಲ್’, ‘ಕೃಷ್ಣ’, ‘ಚೆಲ್ಲಾಟ’ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿದ್ದ ಜನಪ್ರಿಯ ನಿರ್ದೇಶಕ ಎಂ.ಡಿ. ಶ್ರೀಧರ್‌ ವಿರಾಮದ ಬಳಿಕ ನಿರ್ದೇಶಿಸಿರುವ ‘ಜಂಬೂಸರ್ಕಸ್’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.

‘ಕುಟುಂಬ ಕುಳಿತು ನೋಡಬಹುದಾದ ಹಾಸ್ಯಮಯ ಚಿತ್ರವಿದು. ಬಹಳ ಕಷ್ಟಪಟ್ಟು ಚಿತ್ರ ಮುಗಿಸಿ ಬಿಡುಗಡೆ ಹಂತ ತಲುಪಿದ್ದೇವೆ. ಇದೇ ತಿಂಗಳ ಮೂರನೇ ಅಥವಾ ಕೊನೆಯ ವಾರ ಚಿತ್ರ ತೆರೆಗೆ ಬರಲಿದೆ. ಸಣ್ಣ ಬಜೆಟ್‌ನಲ್ಲಿ ನಿರ್ಮಿಸಿದ ಚಿತ್ರ. ಹೀಗಾಗಿ ಪ್ರಮೋಷನ್‌ ಕೂಡ ದೊಡ್ಡ ಮಟ್ಟದಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದರು ನಿರ್ದೇಶಕ ಎಂ.ಡಿ.ಶ್ರೀಧರ್‌.

ಹಾಸ್ಯದೊಂದಿಗೆ ಡ್ರಾಮಾ ಕಥೆ ಹೊಂದಿರುವ ಚಿತ್ರಕ್ಕೆ ‘ಖುಷಿ’ ಸುರೇಶ್ ಅವರು ಮಹತಿ ಕಂಬೈನ್ಸ್ ಮೂಲಕ ಬಂಡವಾಳ ಹೂಡಿದ್ದಾರೆ. ಪ್ರವೀಣ್ ತೇಜ್ ನಾಯಕನಾಗಿದ್ದು, ಅಂಜಲಿ ಎಸ್.ಅನೀಶ್ ನಾಯಕಿಯಾಗಿದ್ದಾರೆ.

ADVERTISEMENT

‘ಜನಕ್ಕೆ ಅಂತಿಮವಾಗಿ ಮನರಂಜನೆ ಬೇಕು ಎಂಬುದು ಇತ್ತೀಚೆಗೆ ಗೆಲ್ಲುತ್ತಿರುವ ಚಿತ್ರಗಳಿಂದ ಸ್ಪಷ್ಟವಾಗುತ್ತಿದೆ. ಭರಪೂರ ಮನರಂಜನೆ ಹೊಂದಿರುವ ಚಿತ್ರವಿದು. 20 ವರ್ಷಗಳಿಂದ ಶ್ರೀಧರ್‌ ಅವರ ಜೊತೆ ಕೆಲಸ ಮಾಡಿಕೊಂಡು ಬಂದಿರುವೆ. ಒಳ್ಳೆ ಮನಸ್ಸು ಹೊಂದಿರುವ ಮಲೆನಾಡಿಗರೆಲ್ಲ ಸೇರಿ ನಿರ್ಮಿಸಿರುವ ಚಿತ್ರವಿದು. ಚಿತ್ರದ ಹಾಡುಗಳು ಈಗಾಗಲೇ ಹಿಟ್‌ ಆಗಿವೆ. ಚಿತ್ರ ಕೂಡ ಯಶಸ್ವಿಯಾಗುತ್ತದೆ ಎಂಬ ಭರವಸೆಯಿದೆ’ ಎಂದರು ಗೀತಸಾಹಿತಿ ಕವಿರಾಜ್‌. 

ವಾಸುಕಿ ವೈಭವ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕೃಷ್ಣ ಕುಮಾರ್ (ಕೆ.ಕೆ) ಛಾಯಾಚಿತ್ರಗ್ರಹಣ, ಜ್ಞಾನೇಶ್ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.