ADVERTISEMENT

ಮಾದಕ ಈಜುಡುಗೆಯಲ್ಲಿ ದಿಶಾ ಪಟಾನಿ: ಇನ್‌ಸ್ಟಾ ಕುಟುಂಬವನ್ನು ನಿಬ್ಬೆರಗಾಗಿಸಿದ ನಟಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 5:08 IST
Last Updated 29 ಜನವರಿ 2022, 5:08 IST
   

ಮುಂಬೈ: ಬೀಚ್ ಬೇಬಿ ದಿಶಾ ಪಟಾನಿ ತನ್ನ ಮಾದಕ ಚಿತ್ರಗಳ ಮೂಲಕ ತನ್ನ ಇನ್‌ಸ್ಟಾಗ್ರಾಮ್ ಕುಟುಂಬಕ್ಕೆ ಆಗಾಗ್ಗೆ ನಿಬ್ಬೆರಗಾಗಿಸುತ್ತಾ ಇರುತ್ತಾರೆ.

ಈ ಬಾರಿ ಅವರು ಆಕರ್ಷಕ ಈಜುಡುಗೆಯಲ್ಲಿ ಸಮುದ್ರ ತಟದಲ್ಲಿ ರಿಲ್ಯಾಕ್ಸ್ ಮಾಡುತ್ತಿರುವಚಿತ್ರವನ್ನು ಹಂಚಿಕೊಂಡಿದ್ದಾರೆ. ಫಿಟ್ ಆದ ಮೈಕಟ್ಟು ಮತ್ತು ಹೊಳೆಯುವ ಚರ್ಮಕಾಂತಿಯ ಮೂಲಕ ಮತ್ತೆ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ.

ಈ ಹಿಂದೆ ದಿಶಾ ಪಟಾನಿ ಗುಲಾಬಿ ಬೀಚ್‌ವೇರ್‌ನಲ್ಲಿ ಪೂಲ್‌ನಿಂದ ಹೊರಬಂದ ತಕ್ಷಣ ಕ್ಯಾಮೆರಾಗೆ ಪೋಸ್ ನೀಡಿದ್ದರು.

ADVERTISEMENT

ಮತ್ತೊಂದು ಸೆಟ್ ಆಫ್ ಚಿತ್ರಗಳಲ್ಲಿ, ಗುಲಾಬಿ ಬಣ್ಣದ ಬಿಕಿನಿಯನ್ನು ಧರಿಸಿದ್ದ ಅವರು ಮತ್ಸ್ಯಕನ್ಯೆಯಂತೆ ನೀರಿನಲ್ಲಿ ವಿಶ್ರಾಂತಿ ಪಡೆಯುವ ಮೂಲಕ ಜಾಲತಾಣದಲ್ಲಿ ಬಿಸಿ ಏರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.