ADVERTISEMENT

ರಾಬರ್ಟ್‌ | 'ದೋಸ್ತಾ ಕಣೊ' ಹಾಡಿಗೆ ಸಿನಿರಸಿಕರು ಫಿದಾ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 7:12 IST
Last Updated 21 ಮಾರ್ಚ್ 2020, 7:12 IST
   

ದರ್ಶನ್‌ ಅಭಿನಯ ಮತ್ತು ತರುಣ್‌ ಕಿಶೋರ್‌ ಸುಧೀರ್‌ ನಿರ್ದೇಶನದ ‘ರಾಬರ್ಟ್‌’ ಚಿತ್ರದ ಮತ್ತೊಂದು ಲಿರಿಕಲ್‌ ಹಾಡು ಬಿಡುಗಡೆಯಾಗಿದ್ದು, ಸ್ನೇಹ ಸಂಬಂಧದ ಮಹತ್ವ ಸಾರುವ ‘ದೋಸ್ತಾ ಕಣೊ’ ಹಾಡು ಸಿನಿ ರಸಿಕರಿಗೆ ಸಿಕ್ಕಾಪಟ್ಟೆ ಇಷ್ಟವಾಗುತ್ತಿದೆ.

ಬೈದು ಬುದ್ದಿ ಹೇಳೋ ಫಾದರ್‌‌ಕಾಣೋ ಇವನು

ನೋವಲ್ಲಿ ಕಣ್ಣೀರು ಒರೆಸೊ ಮದರ್ರು ಕಾಣೋ

ADVERTISEMENT

ಜೀವನಕ್ಕೆ ಪಾಠೋ ಹೇಳೊ ಟೀಚರ್‌ ಕಾಣೋ ಇವನು

ಲೈಫ್‌ ಪಾರ್ಟ್‌ನರ್‌ಗಿಂತ ಕ್ಲೋಸು ಕಾಣೋ

ರಕ್ತ ಸಂಬಂಧನೂ ಮೀರಿದ ಬಂಧು ಇವನು

ಜಾತಿಮತಕ್ಕಿಂತ ತುಂಬಾ ದೊಡ್ಡವನು ಇವನು

ಎಲ್ಲರ ಪ್ರೀತಿಗಿಂತ ತುಂಬಾ ಜಾಸ್ತಿ ಪ್ರೀತಿ ನೀಡೋನ್‌ ದೋಸ್ತಾ ಕಣೋ.... ಬ್ರೊ ಲವ್‌ ಯು

ಈ ಹಾಡು ಯೂಟ್ಯೂಬ್‌ನಲ್ಲೂ ಸಖತ್‌ ಸದ್ದು ಮಾಡುತ್ತಿದೆ. ‘ಬಹದ್ದೂರ್‌’ ಖ್ಯಾತಿಯಚೇತನಕ್‌ಕುಮಾರ್‌ ಸಾಹಿತ್ಯ ರಚಿಸಿರುವಈ ಗೀತೆಯನ್ನು ಗಾಯಕರಾದ ವಿಜಯ ಪ್ರಕಾಶ್‌ ಮತ್ತು ಹೇಮಂತ್‌ ಹಾಡಿದ್ದಾರೆ. 40 ನಿಮಿಷಗಳಲಿರಿಕಲ್‌ ಸಾಂಗ್‌ ಅನ್ನು ಈವರೆಗೂ 4.29ಲಕ್ಷ ವೀಕ್ಷಕರು ಆಲಿಸಿದ್ದರು. ಹಾಡಿನ ಸಾಹಿತ್ಯವು ಮತ್ತು ವಿಜಯ್‌– ಹೇಮಂತ್‌ ಜೋಡಿಯ ಕಂಠ ಸಿರಿಯೂ ಸಿನಿರಸಿಕರನ್ನು ಮೋಡಿ ಮಾಡುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ‌ಈ ಹಾಡಿನ ಬಗ್ಗೆ ಅಪಾರ ಪ್ರಶಂಸೆಗಳು ವ್ಯಕ್ತವಾಗಿವೆ. ಕೆಲ ನೆಟ್ಟಿಗರು ಈ ಹಾಡಿನಲ್ಲಿ ದಚ್ಚು ಮತ್ತು ಕಿಚ್ಚ ಇದ್ದಿದ್ರೆ ರೇಂಜೇ ಬೇರೆ ಇರುತ್ತಿತ್ತು ಎನ್ನುವ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅಂಬರೀಷ್‌ ಮತ್ತು ವಿಷ್ಣುವರ್ಧನ್‌ ಅವರ ಜೀವದ ಗೆಳೆತನ ಬಿಂಬಿಸುವ ‘ಕುಚುಕು ಕುಚುಕು’ ಹಾಡನ್ನು ನೆನಪಿಗೆ ತರುವಂತಿದೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ರಾಬರ್ಟ್‌ ಚಿತ್ರದ ‘ಜೈಶ್ರೀರಾಮ್‌’ ಹಾಡು ಕೂಡ ಸಿನಿರಸಿಕರ ಮನಗೆದ್ದಿತ್ತು. ಈ ಹಾಡಿನಲ್ಲಿರುವ ಸ್ಟೆಪ್‌ ಟಿಕ್‌ಟಾಕ್‌ನಲ್ಲಿ ಟ್ರೆಂಡ್‌ ಹುಟ್ಟು ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.