ADVERTISEMENT

ಸಿನಿಮಾದವರಷ್ಟೇ ಏಕೆ ಗುರಿ: ನಟ ಚೇತನ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 21:00 IST
Last Updated 27 ಸೆಪ್ಟೆಂಬರ್ 2020, 21:00 IST
ನಟ  ಚೇತನ್
ನಟ  ಚೇತನ್   

ಮಾಗಡಿ: ರಾಜಕಾರಣಿ, ಉದ್ಯಮಿ ಮತ್ತುಅಧಿಕಾರಿಗಳ ಮಕ್ಕಳು ಡ್ರಗ್ಸ್‌ ಸೇವಿಸುವುದಿಲ್ಲವೇ. ಅವರನ್ನು ಏಕೆ ವಿಚಾರಿಸುತ್ತಿಲ್ಲ ಎಂದು ‘ಆ ದಿನಗಳು’ ಖ್ಯಾತಿಯ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್‌ ಪ್ರಶ್ನಿಸಿದ್ದಾರೆ.

ಡ್ರಗ್ಸ್‌ ದಂಧೆಯಲ್ಲಿ ಚಿತ್ರನಟ, ನಟಿಯರಷ್ಟೇ ಸಿಲುಕಿದ್ದಾರೆ ಎಂದು ಬಿಂಬಿಸುವುದು ಸರಿಯಲ್ಲ.ಸಿನಿಮಾರಂಗ ಮಾತ್ರವಲ್ಲ ಎಲ್ಲೆಡೆ ಡ್ರಗ್ಸ್‌ ದಂಧೆ ಇಲ್ಲವೇ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಕೇಳಿದರು.

‘ಡ್ರಗ್ಸ್‌ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಆರೋಪಿಗಳನ್ನು ಅಪರಾಧಿಗಳಂತೆ ಬಿಂಬಿಸುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಅಮೆರಿಕದಲ್ಲಿ ಕರಡಿ ವೇಷದಲ್ಲಿರುವ ಪೊಲೀಸರು ಡ್ರಗ್ಸ್, ಸಿಗರೇಟ್‌ ಆಲ್ಕೋಹಾಲ್‌ ಸೇವನೆ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತಾರೆ. ಅದೇ ರೀತಿ ನಮ್ಮ ದೇಶದಲ್ಲೂಮಕ್ಕಳು ಮತ್ತು ಯುವಕರಿಗೆ ಡ್ರಗ್ಸ್‌ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿ ಹೇಳುವ ಕೆಲಸ ಆಗಬೇಕಿದೆ ಎಂದು ಚೇತನ್‌ ಆಶಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.