ADVERTISEMENT

ಮತ್ತೆ ನಿರ್ದೇಶನದತ್ತ ದುನಿಯಾ ವಿಜಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 9:38 IST
Last Updated 27 ಅಕ್ಟೋಬರ್ 2020, 9:38 IST
ಹೊಸ ಚಿತ್ರದ ಮಾತುಕತೆ ಸಂದರ್ಭ ಜೊತೆಯಾಗಿ ಕಾಣಿಸಿಕೊಂಡ ನಟರಾದ ಲಕ್ಕಿ, ಶಿವರಾಜ್‌ ಕುಮಾರ್‌, ದುನಿಯಾ ವಿಜಿ
ಹೊಸ ಚಿತ್ರದ ಮಾತುಕತೆ ಸಂದರ್ಭ ಜೊತೆಯಾಗಿ ಕಾಣಿಸಿಕೊಂಡ ನಟರಾದ ಲಕ್ಕಿ, ಶಿವರಾಜ್‌ ಕುಮಾರ್‌, ದುನಿಯಾ ವಿಜಿ   

ಮತ್ತೆ ನಿರ್ದೇಶನಕ್ಕೆ ಬರುತ್ತಿದ್ದಾರೆ ದುನಿಯಾ ವಿಜಿ. ಯುವಜನರಿಗೆ ಹತ್ತಿರವಾಗುವ ಪ್ರೇಮಕಥೆಯೊಂದನ್ನು ಅವರು ನಿರ್ದೇಶಿಸುತ್ತಿದ್ದಾರೆ. ಇದು ‘ಸಲಗ’ ಚಿತ್ರಕ್ಕಿಂತ ಭಿನ್ನವಾಗಿರಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಸುಮಾರು 18ರಿಂದ 22ರ ವಯೋಮಾನದ ಯುವಜನರನ್ನು ಕೇಂದ್ರವಾಗಿಟ್ಟುಕೊಂಡು ಈ ಚಿತ್ರ ಬರುತ್ತಿದೆ. ಅಂದಹಾಗೆ ಈ ಚಿತ್ರಕ್ಕೆ ಲಕ್ಕಿ (ಲಕ್ಷ್ಮಣ ಗೋಪಾಲ್‌) ನಾಯಕನಾಗಲಿದ್ದಾರೆ ಎಂದೂ ಅವರು ಫೇಸ್‌ ಬುಕ್‌ನಲ್ಲಿ ಬರೆದ ದೀರ್ಘ ಬರಹದಲ್ಲಿ ಪ್ರಕಟಿಸಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಕೆಲವು ಹೊಸ ಸ್ಕ್ರಿಪ್ಟ್‌ ಬರೆದಿದ್ದೇನೆ. ಅವುಗಳ ಪೈಕಿ ಒಂದುಸಿನಿಮಾ ಆಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ADVERTISEMENT

ಹೊಸ ಚಿತ್ರಕ್ಕೆ ನಟ ಶಿವರಾಜ್‌ ಕುಮಾರ್‌ ಶುಭ ಹಾರೈಸಿದ್ದಾರೆ. ದುನಿಯಾ ವಿಜಿ ಶಿವರಾಜ್‌ ಕುಮಾರ್‌ ಲಕ್ಕಿ ಜೊತೆಯಾಗಿ ನಿಂತಿರುವ ಚಿತ್ರವನ್ನು ವಿಜಿ ಫೇಸ್‌ ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಬೆಂಬಲವನ್ನೂ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.