ADVERTISEMENT

ಜೂನ್‌ 13ಕ್ಕೆ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ತೆರೆಗೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 22:17 IST
Last Updated 14 ಮೇ 2025, 22:17 IST
   

2022ರಲ್ಲಿ ಸೆಟ್ಟೇರಿದ್ದ ದಿಗಂತ್‌ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಕೊನೆಗೂ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಜೂನ್‌ 13ರಂದು ತೆರೆಕಾಣಲಿದೆ. 

ಹಲವು ಕಾರಣಗಳಿಂದ ಮುಂದೂಡಲ್ಪಡುತ್ತಿದ್ದ ಈ ಸಿನಿಮಾವನ್ನು ‘ಶಾಖಾಹಾರಿ’ ನಿರ್ಮಾಪಕ ರಾಜೇಶ್‌ ಕೀಳಂಬಿ ಹಾಗೂ ‘ಬ್ಲಿಂಕ್‌’ ನಿರ್ಮಾಪಕ ರವಿಚಂದ್ರನ್‌ ಎ.ಜೆ ಕೈಗೆತ್ತಿಕೊಂಡು ತೆರೆಗೆ ತರುತ್ತಿದ್ದಾರೆ. ಎಡಗೈ ಬಳಸುವವರನ್ನೇ ಗಮನದಲ್ಲಿಟ್ಟುಕೊಂಡು, ಅವರ ಜೀವನ ಶೈಲಿ ಕುರಿತು ಈ ಚಿತ್ರ ಕಟ್ಟಿಕೊಡಲಾಗಿದೆ. ಎಡಗೈ ಬಳಸುವವರು ಅನುಭವಿಸುವ ಸಮಸ್ಯೆ, ಸಂಕಷ್ಟದ ಸರಮಾಲೆಯೇ ಚಿತ್ರದಲ್ಲಿದೆ. ಚಿತ್ರಕ್ಕೆ ಸಮರ್ಥ್ ಬಿ. ಕಡಕೊಳ್ ಆ್ಯಕ್ಷನ್‌ ಕಟ್‌ ಹೇಳಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರ. ಚಿತ್ರದಲ್ಲಿ ದಿಗಂತ್‌ಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಮತ್ತು ಧನು ಹರ್ಷ ನಟಿಸಿದ್ದಾರೆ. ‘ರಂಗಿತರಂಗ’, ‘ವಿಕ್ರಾಂತ್‌ ರೋಣ’ ಖ್ಯಾತಿಯ ನಟ ನಿರೂಪ್‌ ಭಂಡಾರಿ ವಿಶೇಷ ಪಾತ್ರದಲ್ಲಿದ್ದಾರೆ.  

‘ಬ್ಲಿಂಕ್‌ ಹಾಗೂ ಶಾಖಾಹಾರಿ ಸಿನಿಮಾಗಳ ನಿರ್ಮಾಪಕರು ನಮ್ಮ ಸಿನಿಮಾ ಜೊತೆ ಕೈಜೋಡಿಸಿದ್ದಾರೆ. ಈ ಸಿನಿಮಾವೂ ಆ ಸಿನಿಮಾಗಳ ರೀತಿಯೇ ಹೆಸರು ಮಾಡಲಿದೆ ಎನ್ನುವ ನಂಬಿಕೆ ಇದೆ. ಈ ಸಿನಿಮಾ ಮಾಡುತ್ತಾ ನಾನು ಬಲಗೈ ಬಳಸುವವನೋ, ಎಡಗೈ ಬಳಸುವವನೋ ಎಂಬ ಗೊಂದಲ ಶುರುವಾಗಿತ್ತು. ನನ್ನ ಪಾತ್ರ ಎಡಗೈ ಬಳಸುವ ವ್ಯಕ್ತಿಯದು. ಭಿನ್ನವಾದ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ನಿಧಿ ಸುಬ್ಬಯ್ಯ ಜೊತೆ ‘ಪಂಚರಂಗಿ–2’ ಮಾಡೋಣ ಎಂದಿದ್ದೇನೆ. ರಾಜೇಶ್‌ ಕೀಳಂಬಿ ಅವರೂ ಇದಕ್ಕೆ ಒಪ್ಪಿದ್ದಾರೆ’ ಎಂದಿದ್ದಾರೆ ದಿಗಂತ್‌.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.