ADVERTISEMENT

ಮುಂದುವರಿದ ‘ಏಕ್‌ ಲವ್‌ಯಾ’ ಶೂಟಿಂಗ್‌

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 11:40 IST
Last Updated 10 ನವೆಂಬರ್ 2020, 11:40 IST
ಲಡಾಕ್‌ನಲ್ಲಿ ಲೊಕೇಷನ್‌ ಹುಡುಕಾಟದಲ್ಲಿರುವ ಪ್ರೇಮ್‌ (ಟ್ವಿಟರ್‌ ಚಿತ್ರ)
ಲಡಾಕ್‌ನಲ್ಲಿ ಲೊಕೇಷನ್‌ ಹುಡುಕಾಟದಲ್ಲಿರುವ ಪ್ರೇಮ್‌ (ಟ್ವಿಟರ್‌ ಚಿತ್ರ)   

ಏಕ್‌ ಲವ್‌ಯಾ ಚಿತ್ರದ ಶೂಟಿಂಗ್‌ನ್ನು ನಿರ್ದೇಶಕ ಪ್ರೇಮ್‌ ಅವರ ತಂಡ ಇತ್ತೀಚೆಗೆ ಮತ್ತೆ ಮುಂದುವರಿಸಿದೆ.

ಯೂರೋಪ್‌ ದೇಶಗಳಲ್ಲಿ ಈ ವರ್ಷದ ಆರಂಭದಲ್ಲಿ ಶೂಟಿಂಗ್‌ ಆರಂಭವಾಗಿತ್ತು. ಆದರೆ, ಕೋವಿಡ್‌ ಕಾರಣದಿಂದ ಶೂಟಿಂಗ್‌ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಅನ್‌ಲಾಕ್‌ ಪ್ರಕ್ರಿಯೆ ಆರಂಭವಾದ ಬಳಿಕ ತಂಡವು ಬಾಕಿ ಉಳಿದ (ಹಾಡಿನ ಭಾಗದ) ಚಿತ್ರೀಕರಣ ಮುಂದುವರಿಸಿದೆ.

ರೀಷ್ಮಾ ನಾನಯ್ಯ ಮತ್ತು ರಾಣಾ ಮತ್ತು ರಚಿತಾರಾಮ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಉಳಿದ ಭಾಗಗಳನ್ನು ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಚಿತ್ರೀಕರಿಸಲಾಗುವುದು ಎಂದು ತಂಡ ಹೇಳಿಕೊಂಡಿದೆ. ಇದಕ್ಕಾಗಿ ಲೊಕೇಶನ್‌ ನೋಡಲು ಪ್ರೇಮ್‌ ನೇತೃತ್ವದ ತಂಡ ಕಾಶ್ಮೀರದ ಲಡಾಖ್‌‌ಗೆತೆರಳಿದೆ.

ADVERTISEMENT

ಈ ತಿಂಗಳ ಕೊನೆ ಅಥವಾ ಡಿಸೆಂಬರ್‌ ಮೊದಲ ವಾರದಲ್ಲಿ ಈ ಹಾಡಿನ ಭಾಗದ ಚಿತ್ರೀಕರಣ ಮುಗಿಯಬಹುದು ಎಂದು ಚಿತ್ರತಂಡ ಲೆಕ್ಕಾಚಾರ ಹಾಕಿದೆ.

ಯುವ ಜೋಡಿಯ ಪ್ರೇಮ ಕಥೆಯವಸ್ತು ಏಕ್‌ ಲವ್‌ಯಾ ಚಿತ್ರದ್ದು. ರಕ್ಷಿತಾ ಪ್ರೇಂ ಚಿತ್ರ ನಿರ್ಮಿಸುತ್ತಿದ್ದಾರೆ. ಅಂದಹಾಗೆ ಇದು ರಾಣಾ ಅವರ ಮೊದಲ ಚಿತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.