ADVERTISEMENT

ಇಶಾ ಗುಪ್ತಾ ಫೋಟೊ ಶೂಟ್‌

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:30 IST
Last Updated 26 ಫೆಬ್ರುವರಿ 2020, 19:30 IST
ಈಶಾ ಗುಪ್ತಾ
ಈಶಾ ಗುಪ್ತಾ   
""

‘ಬಿಸಿ ಬಿಸಿ’ ಚಿತ್ರಗಳ ಮೂಲಕ ಸದಾ ಸುದ್ದಿಯಲ್ಲಿರುವ ಬಾಲಿವುಡ್‌ನ ಮಾದಕ ಚೆಲುವೆ ಇಶಾ ಗುಪ್ತ ಇತ್ತೀಚೆಗೆ ತಮ್ಮ ಫೋಟೊಶೂಟ್‌ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಫೆಬ್ರುವರಿ 15ರಂದು ‘ಶಾರ್ಟ್‌‘ ಹಾಕಿಕೊಂಡು ಫೋಟೊಶೂಟ್‌ ನಡೆಸಿದ ಚಿತ್ರಗಳನ್ನು, ನಾಲ್ಕೈದು ದಿನಗಳಿಂದ ತಮ್ಮಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬಿಳಿ ಉಡುಪಿನಲ್ಲಿ ಪೋಸ್‌ ಕೊಟ್ಟಿರುವ, ಬಿಕಿನಿ ಉಡುಗೆಯಲ್ಲಿ ಸೂರ್ಯನಿಗೆ ಮುತ್ತಿಡುತ್ತಿರುವ (ಬಿಸಿಲಿಗೆ ಮೈಯೊಡ್ಡಿ) ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಇಶಾ ಸೌಂದರ್ಯವನ್ನು ಅಭಿಮಾನಿಗಳು ಕಮೆಂಟ್‌ಗಳ ಮೂಲಕ ಬಣ್ಣಿಸಿದ್ದಾರೆ.

ADVERTISEMENT

ತೆಲುಗು, ತಮಿಳು ಸೇರಿಂದಂತೆ ಹಿಂದಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮುಖ್ಯವಾಗಿ ಐಟಂ ಸಾಂಗ್‌ಗಳಲ್ಲಿ ಇಶಾ ಗುಪ್ತಾ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.

ಇಶಾ ಗುಪ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.