ADVERTISEMENT

‘ಎವಿಡೆನ್ಸ್‌’ ಚಿತ್ರೀಕರಣ ಪೂರ್ಣ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 7:17 IST
Last Updated 25 ಸೆಪ್ಟೆಂಬರ್ 2020, 7:17 IST
ಎವಿಡೆನ್ಸ್‌ ಚಿತ್ರತಂಡ
ಎವಿಡೆನ್ಸ್‌ ಚಿತ್ರತಂಡ   

ಒಂದೇ ಜಾಗ, ಎರಡೇ ಪಾತ್ರ. ಇದು ‘ಎವಿಡೆನ್ಸ್’ ಚಿತ್ರದ ವಿಶೇಷ.ಈ ಚಿತ್ರಕ್ಕೆ ಪ್ರವೀಣ್ ರಾಮಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಕನಕಪುರ ಮುಖ್ಯರಸ್ತೆಯಲ್ಲಿರುವ ಭೂಮಿಕಾ ಸ್ಟುಡಿಯೋದಲ್ಲಿ ಚಿತ್ರದ ಶೂಟಿಂಗ್‌ ಇತ್ತೀಚೆಗಷ್ಟೇ ಪೂರ್ಣಗೊಂಡಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಚಿತ್ರತಂಡ ಕೈಗೆತ್ತಿಕೊಂಡಿದೆ.

ಸಸ್ಪೆನ್ಸ್ , ಥ್ರಿಲ್ಲರ್ ಜಾನರಿನ ಈ ಚಿತ್ರದಲ್ಲಿ ಈವರೆಗೆ ಎಲ್ಲೂ ಅನಾವರಣಗೊಳ್ಳದ ಕಥಾವಸ್ತುವೊಂದು ಇದೆ.ಒಂದೇ ಸ್ಥಳದಲ್ಲಿ, ಎರಡೇ ಪಾತ್ರಗಳ ಮೂಲಕ ಇಡೀ ಚಿತ್ರದ ಕಥೆ ಅನಾವರಣವಾಗಲಿದೆ.ರೋಬೋ ಗಣೇಶ್ ಮತ್ತು ಮಾನಸ ಜೋಷಿ ಆ ಎರಡು ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಎನ್ನುತ್ತಾರೆ ನಿರ್ದೇಶಕ ಪ್ರವೀಣ್ ರಾಮಕೃಷ್ಣ.

ADVERTISEMENT

ಧೃತಿ ಪ್ರೊಡಕ್ಷನ್ಸ್ ಅಡಿಯಲ್ಲಿ ಪ್ರವೀಣ್ ಮತ್ತು ಅವರ ಸ್ನೇಹಿತರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರವಿ ಸುವರ್ಣ ಛಾಯಾಗ್ರಹಣ, ಕಾರ್ತಿಕ್ ವೆಂಕಟೇಶ್ ಸಂಗೀತ ಈ ಚಿತ್ರಕ್ಕಿದೆ.

‘ಒಂದೇ ಜಾಗ ಮತ್ತು ಎರಡು ಪಾತ್ರಗಳನ್ನು ಬಳಸಿಕೊಂಡು ಇಡೀ ಸಿನಿಮಾ ಕಟ್ಟಿಕೊಡುವುದು ನಿಜಕ್ಕೂ ಸವಾಲಿನ ಕೆಲಸ. ನಿರ್ದೇಶಕ ಪ್ರವೀಣ್ ಅವರ ಕಲ್ಪನೆಯೇ ಅದ್ಭುತ. ಪ್ರೇಕ್ಷಕನನ್ನು ಅರೆಕ್ಷಣವೂ ಅತ್ತಿತ್ತ ಅಲುಗಾಡದಂತೆ ಹಿಡಿದಿಡುವ ಶಕ್ತಿ ಈ ಚಿತ್ರಕ್ಕಿದೆ’ ಎನ್ನುತ್ತಾರೆ ಛಾಯಾಗ್ರಾಹಕ ರವಿ ಸುವರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.