ADVERTISEMENT

ಅಮೆಜಾನ್ ಪ್ರೈಂ ನಲ್ಲಿ ‘ಫೇಸ್ ಟು ಫೇಸ್’ ಕನ್ನಡ ಸಿನಿಮಾ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 8:25 IST
Last Updated 21 ಜೂನ್ 2020, 8:25 IST
ಫೇಸ್‌ ಟು ಫೇಸ್ ಸಿನಿಮಾದ ದೃಶ್ಯ
ಫೇಸ್‌ ಟು ಫೇಸ್ ಸಿನಿಮಾದ ದೃಶ್ಯ   

ಕಳೆದ ವರ್ಷ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ, ಪ್ರೇಕ್ಷಕರಿಂದ ಮೆಚ್ಚುಗೆ ಕಳಿಸಿದ್ದ ‘ಫೇಸ್‌ ಟು ಫೇಸ್‌‘ ಕನ್ನಡ ಸಿನಿಮಾ, ಇದೀಗ ‘ಅಮೆಜಾನ್‌ ಪ್ರೈಮ್‌‌‘ನಲ್ಲಿ ಪ್ರದರ್ಶನ ಕಾಣುತ್ತಿದೆ.

ಸಂದೀಪ್‌ ಜನಾರ್ದನ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾ, ಕಥೆಯಲ್ಲಿರುವ ಹೊಸತನದಿಂದಲೇ ಪ್ರೇಕ್ಷಕರ ಮೆಚ್ಚುಗೆ ಕಳಿಸಿತ್ತು.

ರೋಹಿತ್ ಭಾನುಪ್ರಕಾಶ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ದಿವ್ಯಾ ಉರುಡಗ ಮತ್ತು ಪೂರ್ವಿ ಜೋಶಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಎಲ್ಲರೂ ತಂತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಈಗ ಆ ಸಿನಿಮಾ ತಂಡ, ಅಮೆಜಾನ್ ಪ್ರೈಮ್ ಮೂಲಕ ಮತ್ತಷ್ಟು ಪ್ರೇಕ್ಷಕರನ್ನು ತಲುಪುವ ಖುಷಿಯಲ್ಲಿದೆ.

ADVERTISEMENT

ಮೇಲು ನೋಟಕ್ಕೆ ಸರಳವಾಗಿ ಕಾಣುವ, ಪ್ರೇಮದ ಸುತ್ತ ಗಿರಕಿ ಹೊಡೆಯುವಂತೆ ಕಾಣುವ ಕಥಾ ಎಳೆ ಅಷ್ಟು ಸಲೀಸಾಗಿ ಬಿಚ್ಚಿಕೊಳ್ಳುವಂಥಾದ್ದಲ್ಲ.ನಿರ್ದೇಶಕ ಸಂದೀಪ್ ಜನಾರ್ದನ್‌ ಅವರ ನಿರೂಪಣಾಶೈಲಿಯ ಮೂಲಕವೇ ಸಿನಿಮಾವನ್ನು ಪರಿಣಾಮಕಾರಿಯಾಗಿಸಿದೆ.

ಸಿನಿಮಾದಲ್ಲಿ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಕಥೆಯ ಗಾಲಿಗಳು ಅಡ್ಡಾಡುತ್ತವೆ. ಆದರೆ ಕಥೆಯೆಂಬುದು ಹಠಾತ್ತನೆ ಪಥ ಬದಲಿಸಿ ಎಲ್ಲವನ್ನೂ ಗೊಂದಲಕ್ಕೆ ತಳ್ಳುತ್ತಲೇ ಮತ್ತೆ ದಾರಿಗೆ ಮರಳುತ್ತೆ. ಒಂದು ಸಿನಿಮಾವನ್ನು ನೋಡುಗರ ಪಾಲಿಗೆ ಯಾವ್ಯಾವ ಅಂಶಗಳು ವಿಶೇಷವಾಗಿಸಬಹುದೋ ಅದೆಲ್ಲವನ್ನೂ ಒಳಗೊಂಡಿರುವ ಚಿತ್ರ ’ಫೇಸ್ ಟು ಫೇಸ್‘. ಕಥೆ ಸೇರಿದಂತೆ ಎಲ್ಲದರಲ್ಲಿಯೂ ಇಲ್ಲಿ ಹೊಸತನಗಳು ಕಾಣಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.