ADVERTISEMENT

ಹೊಸಬರ ಸಾಹಸ: ‘ಫೆಬ್ರವರಿ 30’ ಚಿತ್ರದ ಟೀಸರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 23:53 IST
Last Updated 18 ನವೆಂಬರ್ 2025, 23:53 IST
ಚಿತ್ರದ ಪೋಸ್ಟರ್‌
ಚಿತ್ರದ ಪೋಸ್ಟರ್‌   

ಸೈಕಾಲಜಿಕಲ್‌, ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಫೆಬ್ರವರಿ 30’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಪ್ರಶಾಂತ್ ಎಂ.ಎಲ್. ನಿರ್ದೇಶನದ ಈ ಚಿತ್ರಕ್ಕೆ ಜೋಸೆಫ್ ಬೇಬಿ ನಿರ್ಮಾಣವಿದೆ.

‘ನಾನು ಸಾಫ್ಟ್‌ವೇರ್‌ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದು, ಬಿಡುವಿನ ವೇಳೆ ಕಥೆ ಬರೆಯುವುದು, ಕಿರುಚಿತ್ರ ಮಾಡುವ ಹವ್ಯಾಸವಿದೆ. ಆ ಪಯಣ ಇಲ್ಲಿಗೆ ಕರೆತಂದು ನಿಲ್ಲಿಸಿದೆ. ನಮ್ಮಲ್ಲಿರುವ ಅರಿಷಡ್ವರ್ಗಗಳೇ ಹೇಗೆ ನಮಗೆ ಮುಳುವಾಗುತ್ತವೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಐದು ಜನ ಸ್ನೇಹಿತರು ಒಂದು ಅಪರಿಚಿತ ಸ್ಥಳಕ್ಕೆ ಹೋದಾಗ, ಅವರಿಗೆ ಏನೆಲ್ಲ ಅನುಭವಗಳಾಗುತ್ತವೆ? ಒಂದು ಅಮಾನುಷ ಶಕ್ತಿಯ ವಿರುದ್ದ ಹೇಗೆಲ್ಲ ಹೋರಾಡುತ್ತಾರೆ ಎಂಬುದೇ ಚಿತ್ರಕಥೆ. ಕೇರಳ ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ನಡೆಸಿದ್ದೇವೆ’ ಎಂದರು ನಿರ್ದೇಶಕ. 

ಅಭಿಷೇಕ್, ಸಾಹಿತ್ಯ ಶೆಟ್ಟಿ, ಅಕ್ಷಯ್, ಮನೋಜ್, ಶಿವಕುಮಾರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪಿ.ಎಂ.ಉನ್ನಿಕೃಷ್ಣನ್‌ ಛಾಯಾಚಿತ್ರಗ್ರಹಣ, ಲಿಜಿನ್‌ ಸಂಗೀತವಿದೆ. ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರಲಿದೆ ಎಂದು ತಂಡ ಹೇಳಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.