ADVERTISEMENT

ಕಿಟೆಲ್‌ರತ್ತ ಗಿರಿರಾಜ್‌ ಚಿತ್ತ

​ಪ್ರಜಾವಾಣಿ ವಾರ್ತೆ
Published 28 ಮೇ 2020, 10:44 IST
Last Updated 28 ಮೇ 2020, 10:44 IST
ಧನ್ಯಾ ಬಾಲಕೃಷ್ಣ
ಧನ್ಯಾ ಬಾಲಕೃಷ್ಣ   

ಮರಾವತಿ’,`ಮೈತ್ರಿ’, ‘ಜಟ್ಟ’ದಂತಹ ವಿಭಿನ್ನ ಮತ್ತು ಸಂದೇಶ ಪ್ರಧಾನ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದವರು ನಿರ್ದೇಶಕ, ನಟ ಕಮ್‌ ಸಾಹಿತಿಬಿ.ಎಂ.ಗಿರಿರಾಜ್.ಭಾವನಾ ರಾಮಣ್ಣ ನಟಿಸಬೇಕಿದ್ದ ‘ಸುರಭಿ’ ಮತ್ತು ಇನ್ನೊಂದು ಶೀರ್ಷಿಕೆ ಇಡದಿದ್ದ ಚಿತ್ರವನ್ನು ಗಿರಿರಾಜ್‌ ನಿರ್ದೇಶಿಸಬೇಕಿತ್ತು. ಆದರೆ, ಈ ಎರಡು ಚಿತ್ರಗಳು ಲಾಕ್‌ಡೌನ್‌ಗೂ ಮೊದಲೇ ‘ಲಾಕ್‌’ ಆಗಿವೆ. ಸದ್ಯಕ್ಕೆ ಟೇಕಾಫ್‌ ಆಗುವ ಲಕ್ಷಣಗಳಿಲ್ಲದ ಈ ಎರಡು ಚಿತ್ರಗಳ ಬಗ್ಗೆ ಹೆಚ್ಚು ಮಾತು ವಿಸ್ತರಿಸಲು ಇಷ್ಟಪಡದ ಇವರು, ಆದಷ್ಟು ಶೀಘ‍್ರ ಮತ್ತೊಂದು ವಿಭಿನ್ನ ಕಥೆಯ ಚಿತ್ರವನ್ನು ಇಟ್ಟುಕೊಂಡು ಪ್ರೇಕ್ಷರ ಮುಂದೆ ಬರುತ್ತೇನೆ ಎನ್ನುವ ವಿಶ್ವಾಸದಲ್ಲಿದ್ದಾರೆ.

‘ಕನ್ನಡ ಮತ್ತು ಇಂಗ್ಲಿಷ್‌ ನಿಘಂಟುಬರೆದ ರೆವರೆಂಡ್‌ ಫರ್ಡಿನೆಂಡ್‌ ಕಿಟೆಲ್‌ ಅವಧಿಯಲ್ಲಿ ನಡೆದ ಪ್ರಮುಖ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ಚಿತ್ರ ಮಾಡುವ ತಯಾರಿಯಲ್ಲಿದ್ದಾರೆ. ಈ ಲಾಕ್‌ಡೌನ್‌ ಅವಧಿಯಲ್ಲಿ ಚಿತ್ರಕಥೆಯ ಕೆಲಸವನ್ನು ಪೂರ್ಣಗೊಳಿಸಿಕೊಂಡಿದ್ದಾರೆ. ಲಾಕ್‌ಡೌನ್‌ ಇರದಿದ್ದರೆ ಇಷ್ಟರೊಳಗೆ ಚಿತ್ರ ಶುರುವಾಗುತ್ತಿತ್ತು’ ಎನ್ನಲು ಅವರು ಮರೆಯಲಿಲ್ಲ.

ಅಚ್ಯುತ್‌ಕುಮಾರ್‌ ಪ್ರಧಾನ ಭೂಮಿಕೆಯಲ್ಲಿರುವ ‘ಅಮರಾವತಿ’ (2017) ಚಿತ್ರದ ನಂತರ ಗಿರಿರಾಜ್‌ ಅವರ ಯಾವುದೇ ಚಿತ್ರ ಸೆಟ್ಟೇರಿಲ್ಲ. ಈಗ ‘ಅಮರಾವತಿ’ ಚಿತ್ರ ಕನ್ನಡದ ಒಟಿಟಿ ವೇದಿಕೆ ‘ನಮ್ಮ ಫ್ಲಿಕ್ಸ್‌’ನಲ್ಲಿ ಪ್ರದರ್ಶನವಾಗುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಸಿಗುತ್ತಿರುವುದಕ್ಕೆ ಅವರು ತುಂಬಾ ಖುಷಿಯಲ್ಲಿದ್ದಂತಿದೆ.

ADVERTISEMENT

ಗಿರಿರಾಜ್‌ ಸಿನಿಮಾಕ್ಕಷ್ಟೇ ಸೀಮಿತವಾಗಿಲ್ಲ. ವೆಬ್‌ ಸರಣಿಯಲ್ಲೂ ಯಶಸ್ಸು ನೋಡಿದ್ದಾರೆ. ನಟಿ ಧನ್ಯಾ ಬಾಲಕೃಷ್ಣ ಮತ್ತು ಭಜರಂಗಿ ಲೋಕಿ ಪ್ರಧಾನ ಭೂಮಿಕೆಯಲ್ಲಿರುವಕನ್ನಡದ ವೆಬ್‌ ಸರಣಿ, ಸೈಕೋ ಥ್ರಿಲ್ಲರ್‌ ಕಥೆಯ‘ರಕ್ತಚಂದನ’ ನಿರ್ದೇಶಿಸಿದ್ದು ಇದೇ ಗಿರಿರಾಜ್‌. ಈ ವೆಬ್‌ಸರಣಿಯನ್ನು ವಾಚೂ (WATCHO) ಒಟಿಟಿಯವರು ಒಳ್ಳೆಯ ಬೆಲೆಗೆ ಖರೀದಿಸಿದ್ದು, ಈ ವೆಬ್‌ ಸರಣಿಯ 11 ಎಪಿಸೋಡ್‌ಗಳು ಪ್ರಸಾರವಾಗಿವೆ. ಬೆಲೆ ಬಗ್ಗೆ ಬಾಯಿಬಿಡದ ಗಿರಿರಾಜ್‌, ‘ನಮ್ಮ ನಿರೀಕ್ಷೆಗೂ ಮೀರಿ ಈ ವೆಬ್‌ ಸರಣಿ ಲಾಭ ತಂದುಕೊಟ್ಟಿದೆ’ ಎನ್ನುವ ಮಾತನ್ನು ತುಂಬಾ ಖುಷಿಯಿಂದಲೇ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.