ADVERTISEMENT

ವಾಮಾಚಾರದ ವಿರುದ್ಧ ‘ಗದಾಯುದ್ಧ’

​ಪ್ರಜಾವಾಣಿ ವಾರ್ತೆ
Published 25 ಮೇ 2023, 23:51 IST
Last Updated 25 ಮೇ 2023, 23:51 IST
ಧನ್ಯಾ ಪಾಟೀಲ್‌
ಧನ್ಯಾ ಪಾಟೀಲ್‌   

ವಾಮಾಚಾರ, ಮಾಟ ಮಂತ್ರದ ಕುರಿತಾದ ಕಥೆಯನ್ನು ಹೊಂದಿರುವ ‘ಗದಾಯುದ್ಧ’ ಚಿತ್ರ ಜೂನ್ 9 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ಇತ್ತೇಚೆಗೆಷ್ಟೆ ಚಿತ್ರದ ಟ್ರೇಲರ್‌ ಬಿಡುಗಡೆಗೊಂಡಿದೆ. ಶ್ರೀವತ್ಸ ರಾವ್ ಚಿತ್ರದ ನಿರ್ದೇಶಕರಾಗಿದ್ದು, ಮುಂಬೈನ ನಿತಿನ್ ಶಿರಗೂರ್, ತಮ್ಮ ಪುತ್ರ ಸುಮಿತ್‌ಗಾಗಿ ಈ ಚಿತ್ರ ನಿರ್ಮಿಸಿದ್ದಾರೆ.

‘ನಾಲ್ಕು ವರ್ಷದ ಹಿಂದೆ ನಿರ್ದೇಶಕರು ಹೇಳಿದ ಈ ಕಥೆ ನನಗೆ ಇಷ್ಡವಾಯಿತು. ಬಾನಾಮತಿ ಅಥವಾ ಬ್ಲಾಕ್ ಮ್ಯಾಜಿಕ್ ಮಹಾರಾಷ್ಡ್ರದಲ್ಲಿಯೂ ಇದೆ. ನಾನು ಅನೇಕ ಮಂದಿಯನ್ನು ಭೇಟಿ ಮಾಡಿ ಈ ಬ್ಲಾಕ್ ಮ್ಯಾಜಿಕ್ ಬಗ್ಗೆ ವಿಚಾರಿಸಿದ್ದೆ’ ಎಂದು ನಿರ್ಮಾಪಕ ನಿತಿನ್ ಶಿರಗೂರ್ ಹೇಳಿದರು.

ಕನ್ನಡ, ಹಿಂದಿ ಸೇರಿದಂತೆ ಐದು ಭಾಷೆಯಲ್ಲಿ ಗದಾಯುದ್ದ ತೆರೆಗೆ ಬರಲಿದೆ. ‘ಚಿತ್ರದ ಕಥೆಗಾಗಿ ಎರಡು ವರ್ಷ ಸಿದ್ದತೆ‌ ಮಾಡಿಕೊಂಡು ಶೂಟಿಂಗ್ ನಡೆಸಿದ್ದೇವೆ. ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ವಾಮಾಚಾರ ನಡೆಯುತ್ತಿರುವ ಕುರಿತು ಮಾಹಿತಿ ಸಂಗ್ರಹಿಸಿ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಕೆಲವು ನೈಜ ಘಟನೆಗಳನ್ನು ಹೊಂದಿರುವ ಒಂದು ಹಾಡನ್ನು ಸೆನ್ಸಾರ್‌ನವರು ಕತ್ತರಿಸುವಂತೆ ಹೇಳಿದರು. ವೇದಗಳ ಕಾಲದಿಂದಲೂ ಇಂತಹ ಪ್ರಯೋಗಗಳು ಇವೆ. ಆಗ ಒಳ್ಳೆ ಉದ್ದೇಶಕ್ಕೆ ಬಳಕೆಯಾಗುತ್ತಿತ್ತು’ ಎಂದು ನಿರ್ದೇಶಕ ಶ್ರೀವತ್ಸ ರಾವ್ ಹೇಳಿದರು.

ADVERTISEMENT

ನಾಯಕಿಯಾಗಿ ಧನ್ಯಾ ಪಾಟೀಲ್‌ ನಟಿಸಿದ್ದಾರೆ. ನಟಿ ‘ಸ್ಪರ್ಶ’ರೇಖಾ, ಶರತ್ ಲೋಹಿತಾಶ್ವ, ಅಯ್ಯಪ್ಪ ಶರ್ಮಾ, ಸಾಧುಕೋಕಿಲ ಮುಂತಾದವರು ಚಿತ್ರದಲ್ಲಿದ್ದಾರೆ.

ನಟಿ ಸ್ಪರ್ಶ ರೇಖಾ ಮಾತನಾಡಿ ಚಿತ್ರದಲ್ಲಿ ನಾನು ಒಬ್ಬ ನಟಿಯಾಗಿಯೇ ಕಾಣಿಸಿಕೊಂಡಿದ್ದೇನೆ.‌ ಮಾಟ ಮಂತ್ರಕ್ಕೆ ಒಳಗಾಗುವ ಸ್ಪರ್ಶ ರೇಖಾ ಆಗಿಯೇ ಕಾಣಿಸಿಕೊಂಡಿದ್ದೇನೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.