ಭಾರ್ಗವ್ ನಾಯಕನಾಗಿ ನಟಿಸಿರುವ ‘ವಿದುರ’ ಚಿತ್ರ ಶೀಘ್ರದಲ್ಲಿ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿದೆ.
‘‘ಇತ್ತೀಚೆಗಷ್ಟೇ ನನ್ನ ನಟನೆಯ ‘ಪರಿಶುದ್ಧಂ’ ಚಿತ್ರ ತೆರೆ ಕಂಡಿತ್ತು. ‘ವಿಪರ್ಯಾಸ’, ‘ವಿದುರ’, ‘ಆಗೋದೆಲ್ಲಾ ಒಳ್ಳೇದಕ್ಕೆ’ ಚಿತ್ರಗಳು ಸೆನ್ಸಾರ್ ಹಂತದಲ್ಲಿವೆ. ‘ವಿದುರ’ ನವೆಂಬರ್‌ನಲ್ಲಿ ತೆರೆಗೆ ಬರಲಿದೆ. ಕನ್ನಡ, ತೆಲುಗಿನಲ್ಲಿ ಸಿದ್ಧಗೊಳ್ಳುತ್ತಿರುವ ಮತ್ತೊಂದು ಚಿತ್ರ ಒಪ್ಪಿಕೊಂಡಿರುವೆ’ ಎಂದರು ಭಾರ್ಗವ್.
ಬಿ.ಲೋಕೇಶ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಭರತ್ ಕುಮಾರ್-ನವೀನ್ ರೆಗಟ್ಟಿ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಬಹುತೇಕ ಹೊಸಬರೇ ಇರುವ ‘ವಿದುರ’ ಚಿತ್ರವು ಆಧುನಿಕ ಕುಟುಂಬದ ಕಥೆ ಹೊಂದಿರುವ ಥ್ರಿಲ್ಲರ್ ಸಿನಿಮಾವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.