ADVERTISEMENT

ಆನಂದ್‌ ಆಡಿಯೊ ತೆಕ್ಕೆಗೆ ‘ಫೈರ್‌ಫ್ಲೈ’

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 0:08 IST
Last Updated 1 ಆಗಸ್ಟ್ 2024, 0:08 IST
ಫೈರ್‌ಫ್ಲೈ 
ಫೈರ್‌ಫ್ಲೈ    

ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ, ವಂಶಿ ನಿರ್ದೇಶನದ ‘ಫೈರ್ ಫ್ಲೈ’ ಸಿನಿಮಾದ ಆಡಿಯೊ ಹಕ್ಕನ್ನು ಆನಂದ್‌ ಆಡಿಯೊ ಖರೀಸಿದಿದೆ. 

ವಂಶಿ ಈ ಸಿನಿಮಾವನ್ನು ನಿರ್ದೇಶಿಸುವುದ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ವಂಶಿಗೆ ಜೋಡಿಯಾಗಿ ರಚನಾ ಇಂದರ್‌ ನಟಿಸಿದ್ದಾರೆ. ‘ಫೈರ್ ಫ್ಲೈ’ ಸಿನಿಮಾಗೆ ಚರಣ್‌ರಾಜ್ ಅದ್ಭುತ ಸಂಗೀತ ಒದಗಿಸಿದ್ದಾರೆ. ಶೀಘ್ರದಲ್ಲಿಯೇ ಚರಣ್ ಟ್ಯೂನ್ ಹಾಕಿರುವ ಹಾಡುಗಳ ಹಬ್ಬ ಆನಂದ್ ಆಡಿಯೊ ಯುಟ್ಯೂಬ್‌ನಲ್ಲಿ ಶುರುವಾಗಲಿದೆ’ ಎಂದಿದೆ ಚಿತ್ರತಂಡ. ಚಿತ್ರದಲ್ಲಿ ಮೂಗು ಸುರೇಶ್‌, ಶೀತಲ್‌ ಶೆಟ್ಟಿ, ಸುಧಾರಾಣಿ, ಅಚ್ಯುತ್‌ಕುಮಾರ್‌ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. 

ಶ್ರೀ ಮುತ್ತು ಸಿನಿ ಸರ್ವೀಸ್‌ನಡಿ ಈ ಸಿನಿಮಾ 2023ರ ಜೂನ್‌ನಲ್ಲಿ ಸೆಟ್ಟೇರಿತ್ತು. ಸಿನಿಮಾ ದೀಪಾವಳಿಗೆ ತೆರೆಕಾಣಲಿದೆ ಎಂದಿದೆ ಚಿತ್ರತಂಡ. ಚಿತ್ರಕ್ಕೆ ಅಭಿಲಾಷ್ ಕಳತ್ತಿ ಛಾಯಾಚಿತ್ರಗ್ರಹಣ ಇದೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.