ADVERTISEMENT

'ಫಿಜಾ' ಸಿನಿಮಾ ನಿರ್ಮಾಪಕ ಪ್ರದೀಪ್ ಗುಹಾ ನಿಧನ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2021, 6:00 IST
Last Updated 22 ಆಗಸ್ಟ್ 2021, 6:00 IST
   

ಬಾಲಿವುಡ್‌ ನಿರ್ಮಾಪಕ ಹಾಗೂ ಹಲವು ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರಾಗಿ ಕೆಲಸ ಮಾಡಿದ್ದ ಪ್ರದೀಪ್ ಗುಹಾ ಶನಿವಾರ ತಡರಾತ್ರಿ ನಿಧನರಾಗಿದ್ದಾರೆ.

ಪ್ರದೀಪ್ ಗುಹಾ ಲಿವರ್‌ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹಲವು ದಿನಗಳಿಂದ ಅವರು ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಪ್ರದೀಪ್‌ ಗುಹಾ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಹೃತಿಕ್ ರೋಷನ್ ಮತ್ತು ಕರಿಷ್ಮಾ ಕಪೂರ್ ಅಭಿನಯದ 'ಫಿಜಾ' ಸಿನಿಮಾವನ್ನು ಪ್ರದೀಪ್‌ ಗುಹಾ ನಿರ್ಮಾಣ ಮಾಡಿದ್ದರು. ಬಾಂಬೆ ಟೈಮ್ಸ್‌ ಪತ್ರಿಕೆ ಸಂಪಾದಕರಾಗಿ, ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ನ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದರು.

ADVERTISEMENT

ಸದ್ಯ ಅವರು 9X ಮೀಡಿಯಾದ ಎಂಡಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಅವರ ಆಪ್ತ ಗೆಳೆಯರು ತಿಳಿಸಿದ್ದಾರೆ. ಪತ್ನಿ ಪಾಪಿಯಾ,ಮಗ ಸಂಕೇತ್ ಅವರನ್ನು ಅಗಲಿದ್ದಾರೆ.

ಪ್ರದೀಪ್‌ ಗುಹಾ ನಿಧನಕ್ಕೆ ಬಾಲಿವುಡ್‌ ಸೇರಿದಂತೆ ಮಾಧ್ಯಮ ಸಂಸ್ಥೆಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.