ADVERTISEMENT

ಮಾಜಿ ಪ್ರಧಾನಿ ನರಂಸಿಂಹ ರಾವ್‌ ಬಯೋಪಿಕ್‌ ಘೋಷಣೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 6:18 IST
Last Updated 29 ಜೂನ್ 2021, 6:18 IST
ನರಂಸಿಂಹ ರಾವ್‌
ನರಂಸಿಂಹ ರಾವ್‌   

ಹೈದರಾಬಾದ್‌: ಇತ್ತೀಚೆಗೆ ಬಾಲಿವುಡ್‌ ಸೇರಿದಂತೆ ಟಾಲಿವುಡ್‌ನಲ್ಲೂ ಬಯೋಪಿಕ್‌ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಇದೀಗ ತೆಲುಗಿನಲ್ಲಿ ಮಾಜಿ ಪ್ರಧಾನಿ ನರಂಸಿಂಹ ರಾವ್‌ ಅವರ ಬಯೋಪಿಕ್‌ ನಿರ್ಮಾಣವಾಗುತ್ತಿದೆ.

ಈಗಾಗಲೇಟಾಲಿವುಡ್‌ನಲ್ಲಿ ವೈಎಸ್‌ಆರ್‌ ಹಾಗೂ ಎನ್‌ಟಿಆರ್‌ ಬಯೋಪಿಕ್‌ಗಳು ನಿರ್ಮಾಣಗೊಂಡು ಯಶಸ್ವಿಯಾಗಿವೆ.ಪಿವಿ ನರಸಿಂಹರಾವ್ ಅವರ 100ನೇ ಜನುಮದಿನದ ಪ್ರಯುಕ್ತ ಅವರ ಬಯೋಪಿಕ್ ಸಿನಿಮಾವನ್ನು ಘೋಷಣೆ ಮಾಡಲಾಗಿದೆ.

ತೆಲುಗಿನಲ್ಲಿ ಹಲವು ಹಿಟ್‌ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಧವಳ ಸತ್ಯಂ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್ ಹೇಳುತ್ತಿದ್ದಾರೆ. ಇನ್ನು ನಿರ್ಮಾಪಕ ರಮೇಶ್‌ ನಾಯ್ಡು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ತೆಲುಗು, ಹಿಂದಿ, ಇಂಗ್ಲಿಷ್‌ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

ADVERTISEMENT

ಈಗಾಗಲೇ ಸಿನಿಮಾಗೆ ಸಂಬಂಧಿಸಿದಂತೆ ಪ್ರೀ–ಪ್ರೊಡಕ್ಷನ್‌ ಕೆಲಸಗಳು ಆರಂಭವಾಗಿವೆ. ಬಾಲಿವುಡ್‌ ನಟರೊಬ್ಬರು ನರಸಿಂಹ ರಾವ್‌ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

ಪಿ.ವಿ.ನರಸಿಂಹ ರಾವ್ ಅವರು ಜೂನ್ 28, 1921ರಲ್ಲಿ ಕರೀಂನಗರದ ವಂಗಾರದಲ್ಲಿ ಜನಿಸಿದರು. ಬಿಎಸ್ಸಿ, ಎಲ್‌ಎಲ್‌ಬಿ ಪದವಿ ಪಡೆದ ಬಳಿಕ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ರಾಜಕೀಯಕ್ಕೆ ಪ್ರವೇಶ ಮಾಡಿದರು. 1991 ರಿಂದ 1996ರವರೆಗೂಅವರು ಭಾರತದ ಪ್ರಧಾನಮಂತ್ರಿ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.