ಲಾಸ್ ಏಂಜಲೀಸ್: 2025ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಏಂಜಲೀಸ್‌ನಲ್ಲಿ ಭಾನುವಾರ ಅದ್ದೂರಿಯಾಗಿ ನಡೆದಿದೆ. ಅನೋರಾ ಹಾಗೂ ದಿ ಬ್ರೂಟಲಿಸ್ಟ್ ಚಿತ್ರಗಳು ಹೆಚ್ಚು ಪ್ರಶಸ್ತಿಗಳನ್ನು ಪಡೆದಿವೆ. ಅತ್ಯುತ್ತಮ ಚಿತ್ರ, ನಿರ್ದೇಶನ, ನಟ, ನಟಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿಜೇತರ ಪಟ್ಟಿಯನ್ನು ಘೋಷಿಸಲಾಗಿದೆ. ಆಸ್ಕರ್ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ.
ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ 2025–ವಿಜೇತರ ಪಟ್ಟಿ | |
---|---|
ಅತ್ಯುತ್ತಮ ಚಿತ್ರ | ಅನೋರಾ |
ಅತ್ಯುತ್ತಮ ನಟ | ಆಡ್ರಿಯನ್ ಬ್ರಾಡಿ( ದಿ ಬ್ರೂಟಲಿಸ್ಟ್) |
ಅತ್ಯುತ್ತಮ ನಟಿ | ಮೈಕಿ ಮ್ಯಾಡಿಸನ್ (ಅನೋರಾ) |
ಅತ್ಯುತ್ತಮ ನಿರ್ದೇಶಕ | ಸೀನ್ ಬೇಕರ್(ಅನೋರಾ) |
ಅತ್ಯುತ್ತಮ ಪೋಷಕ ನಟ | ಕೀರನ್ ಕುಲ್ಕಿನ್ (ಎ ರಿಯಲ್ ಪೇನ್) |
ಅತ್ಯುತ್ತಮ ಪೋಷಕ ನಟಿ | ಜೊ ಸಲ್ಡಾನಾ (ಎಮಿಲಿಯಾ ಪೆರೆಜ್) |
ಅತ್ಯುತ್ತಮ ಮೂಲ ಚಿತ್ರಕಥೆ | ಅನೋರಾ |
ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್ | ಫ್ಲೋ |
ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ | ಇನ್ ದಿ ಶಾಡೋ ಆಫ್ ದಿ ಸೈಪ್ರೆಸ್ |
ಅತ್ಯುತ್ತಮ ಅಂತರರಾಷ್ಟ್ರೀಯ ಸಿನಿಮಾ | ಐ ಆ್ಯಮ್ ಸ್ಟಿಲ್ ಹಿಯರ್(ಬ್ರೆಜಿಲ್) |
ಅತ್ಯುತ್ತಮ ಸಾಕ್ಷ್ಯಚಿತ್ರ | ನೋ ಅದರ್ ಲ್ಯಾಂಡ್ |
ಅತ್ಯುತ್ತಮ ಸಾಕ್ಷ್ಯಚಿತ್ರ(ಶಾರ್ಟ್ ಫಿಲ್ಮ್) | ದಿ ಓನ್ಲಿ ಗರ್ಲ್ ಇನ್ ದಿ ಆರ್ಕೆಸ್ಟ್ರಾ |
ಬೆಸ್ಟ್ ಒರಿಜಿನಲ್ ಮ್ಯೂಸಿಕ್ | ದಿ ಬ್ರೂಟಲಿಸ್ಟ್ |
ಬೆಸ್ಟ್ ಒರಿಜಿನಲ್ ಸಾಂಗ್ | ಎಮಿಲಿಯಾ ಪೆರೆಜ್ ಚಿತ್ರದ ಎಲ್ ಮಾಲ್ |
ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ | ಐ ಆಮ್ ನಾಟ್ ಎ ರೋಬೋಟ್ |
ಅತ್ಯುತ್ತಮ ಸಿನಿಮಾಟೋಗ್ರಫಿ | ದಿ ಬ್ರೂಟಲಿಸ್ಟ್ |
ಬೆಸ್ಟ್ ವಿಜ್ಯೂವಲ್ಸ್ ಎಫೆಕ್ಸ್ಟ್ | ಡ್ಯೂನ್: ಪಾರ್ಟ್ 2 |
ಅತ್ಯುತ್ತಮ ಸಂಕಲನ | ಅನೋರಾ |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.