
ಮಂಗಳೂರು: ‘ಫುಲ್ ಮೀಲ್ಸ್’ ಕನ್ನಡ ಸಿನಿಮಾ ನ.21ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕ ನಟ ಲಿಖಿತ್ ಶೆಟ್ಟಿ ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಈ ಸಿನಿಮಾಕ್ಕೆ ಮೂರು ವರ್ಷ ಕೆಲಸ ಮಾಡಿದ್ದೇವೆ. ಸಿನಿಮಾ ಕಥೆ ಸುಂದರವಾಗಿದ್ದು, ತುಳುನಾಡಿನ ಜನರು ಸಿನಿಮಾ ನೋಡಿ ಹರಸಬೇಕು’ ಎಂದರು.
ಚಿತ್ರದ ನಿರ್ದೇಶಕ ವಿನಾಯಕ್ ಮಾತನಾಡಿ, ’ಮದುವೆ ಸಮಾರಂಭಗಳ ಛಾಯಾಗ್ರಾಹಕನೊಬ್ಬ ಪ್ರೀತಿಯ ಬಲೆಗೆ ಬೀಳುವ ಕಥಾಹಂದರವನ್ನು ಹೊಂದಿರುವ ಹಾಸ್ಯಭರಿತ ಚಿತ್ರ ಇದಾಗಿದೆ. ಪ್ರಿ ವೆಡ್ಡಿಂಗ್ ಶೂಟಿಂಗ್ ನಡೆಯುವ ಬೆಂಗಳೂರಿನ ಸುತ್ತಮುತ್ತ ಜಾಗಗಳಲ್ಲಿ ಶೂಟಿಂಗ್ ನಡೆದಿದೆ. ಚಿತ್ರದ ಟ್ರೈಲರ್ ಹಾಗೂ ಚಿತ್ರದ ಹಾಡು ‘ವಾಹ್ ಏನೋ ಹವಾ’ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಜನಯಪ್ರಿಯತೆ ಗಳಿಸಿದೆ. ದೀಪು ಎಸ್ ಕುಮಾರ್ ಸಂಕಲನ, ಮನೋಹರ್ ಜೋಷಿ ಛಾಯಾಗ್ರಹಣ, ಹರೀಶ್ ಗೌಡ ಸಂಭಾಷಣೆ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ’ ಎಂದರು.
ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲಬೈಲ್, ಸಂಗೀತ ನಿರ್ದೇಶಕ ಗುರುಕಿರಣ್,
ನಾಯಕಿ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮಾ ತಮ್ಮ ಅನುಭವ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.