ADVERTISEMENT

ಜೂನ್‌ನಲ್ಲಿ ‘ಗೇಮ್ ಓವರ್’

ಏಜೆನ್ಸೀಸ್
Published 28 ಮೇ 2019, 4:41 IST
Last Updated 28 ಮೇ 2019, 4:41 IST
ತಾಪ್ಸಿ ಪನ್ನು
ತಾಪ್ಸಿ ಪನ್ನು   

ತಮಿಳು ಮತ್ತು ತೆಲುಗು ದ್ವಿಭಾಷೆಯಲ್ಲಿ ಸಿದ್ಧವಾಗಿರುವ ತಾಪ್ಸಿ ಪನ್ನು ಅಭಿನಯದ ‘ಗೇಮ್ ಓವರ್’ ಸಿನಿಮಾ ಜೂನ್ 14ಕ್ಕೆ ಬಿಡುಗಡೆಯಾಗಲಿದೆ. ಅಶ್ವಿನ್ ಶರವಣನ್ ನಿರ್ದೇಶನದ ಈ ಚಿತ್ರಕ್ಕೆ ಎಸ್. ಶಶಿಕಾಂತ್ ನಿರ್ಮಾಪಕರು. ಚಿತ್ರ ಬಿಡುಗಡೆ ಸೆನ್ಸಾರ್ ಮಂಡಳಿ ಒಪ್ಪಿಗೆ ನೀಡಿದ್ದು, ತಾಪ್ಸಿ ಈ ಸಿನಿಮಾದಲ್ಲಿ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದೀರ್ಘಕಾಲದ ತಮಿಳು ಚಿತ್ರರಂಗಕ್ಕೆ ಮರಳಿರುವ ತಾಪ್ಸಿ, ಈ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದ ಕಥೆಯನ್ನು ಕೇಳಿದಾಗಲೇ ಸಿನಿಮಾದ ಬಗ್ಗೆ ಕಾತರರಾಗಿದ್ದ ತಾಪ್ಸಿ, ಇದನ್ನು ತಮ್ಮ ಅಭಿಮಾನಿಗಳ ಖುಷಿಗಾಗಿ ಒಪ್ಪಿಕೊಂಡಿದ್ದಾರೆ. ಸದಾ ಭಿನ್ನ ಕಥಾವಸ್ತು ಮತ್ತು ಪಾತ್ರಗಳನ್ನು ಅರಸುವ ತಾಪ್ಸಿಗೆ ಈ ಚಿತ್ರದಲ್ಲೂ ವಿಶೇಷ ರೀತಿಯಲ್ಲಿ ಕಾಣಿಸಿಕೊಳ್ಳುವ ಅವಕಾಶ ದಕ್ಕಿದೆ. ‘ಗೇಮ್ ಓವರ್’ ತಾಪ್ಸಿ ವೃತ್ತಿಜೀವನದಲ್ಲಿ ಮತ್ತೊಂದು ಭಿನ್ನ ಚಿತ್ರವಾಗುವ ಲಕ್ಷಣಗಳಿವೆ.

ನಾಲ್ಕು ವರ್ಷಗಳ ನಂತರ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಸಿಕ್ಕಿದೆ. ವೈನಾಟ್ ಸ್ಟುಡಿಯೊ ನಿರ್ಮಾಣದ ಈ ಚಿತ್ರ ತಾಪ್ಸಿಗೆ ತಮಿಳಿಗೆ ಮತ್ತೆ ಮರಳಲು ಒಳ್ಳೆಯ ಅವಕಾಶವನ್ನೇ ನೀಡಿದೆ. ಚಿತ್ರದ ಬಿಡುಗಡೆ ಬಗ್ಗೆ ಅಪಾರ ನಿರೀಕ್ಷೆ ಇದೆ ಎಂದು ನಿರ್ದೇಶಕ ಅಶ್ವಿನ್ ಹೇಳಿಕೊಂಡಿದ್ದಾರೆ.

ADVERTISEMENT

ತಮಿಳು ಪ್ರೇಕ್ಷಕರಿಗೆ ಗೇಮ್ ಓವರ್ ಭಿನ್ನ ಬಗೆಯ ಅನುಭವ ನೀಡಲಿದೆ. ಪಕ್ಕಾ ಸಸ್ಪೆನ್ಸ್, ಥ್ರಿಲ್ಲರ್ ಆಗಿರುವ ಈ ಚಿತ್ರ ‘ಮಾಯಾ’ ಸಿನಿಮಾಕ್ಕಿಂತಲೂ ಭಿನ್ನ ಬಗೆಯ ಕಥಾ ಹಂದರ ಹೊಂದಿದೆ. ಅಶ್ವಿನ್ ಶರವಣನ್ ಅವರ ಪ್ರಥಮ ಚಿತ್ರ ‘ಮಾಯಾ’ದ ಮೂಲಕ ನಯನತಾರಾ ಮತ್ತೆ ಲೈಮ್ ಲೈಟ್‌ಗೆ ಬಂದಿದ್ದರು. ಅಷ್ಟೇ ಅಲ್ಲ ಆ ಸಿನಿಮಾ ತಮಿಳು ಸಿನಿರಂಗದಲ್ಲಿ ಹೊಸತನವನ್ನೂ ತಂದಿತ್ತು. ಹಾಗಾಗಿ, ‘ಗೇಮ್ ಓವರ್’ ಸಿನಿಮಾ, ಚಿತ್ರದ ನಿರ್ದೇಶಕರಿಂದ ಹಿಡಿದು ಪ್ರೇಕ್ಷಕರ ತನಕ ಅಪಾರ ಕುತೂಹಲ ಹುಟ್ಟುಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.