ADVERTISEMENT

ನಟಿ ಗಾನವಿ ಲಕ್ಷ್ಮಣ್ ಅಭಿನಯದ ‘ಭಾವಚಿತ್ರ’ ಸಿನಿಮಾ ವೂಟ್‌ ಸೆಲೆಕ್ಟ್‌ನಲ್ಲಿ

​ಪ್ರಜಾವಾಣಿ ವಾರ್ತೆ
Published 5 ಮೇ 2022, 9:42 IST
Last Updated 5 ಮೇ 2022, 9:42 IST
ಭಾವಚಿತ್ರ ಸಿನಿಮಾ ಪೋಸ್ಟರ್‌
ಭಾವಚಿತ್ರ ಸಿನಿಮಾ ಪೋಸ್ಟರ್‌   

ನಟಿ ಗಾನವಿ ಲಕ್ಷ್ಮಣ್ ಹಾಗೂ ನಟ ಚಕ್ರವರ್ತಿ ಅಭಿನಯದ ‘ಭಾವಚಿತ್ರ’ ಸಿನಿಮಾ ಮೇ 6ರಿಂದ ಒಟಿಟಿ ವೇದಿಕೆ ವೂಟ್‌ ಸೆಲೆಕ್ಟ್‌ನಲ್ಲಿ ಪ್ರಸಾರವಾಗಲಿದೆ.

ಗಿರೀಶ್‌ ಕುಮಾರ್‌ ಅವರ ನಿರ್ದೇಶನದ ‘ಭಾವಚಿತ್ರ’ ಸಿನಿಮಾದ ಕಥಾವಸ್ತು ಫೋಟೊ ಮತ್ತು ಫೋಟೊಗ್ರಫಿ. ಟೆಕ್ನೋ ಥ್ರಿಲ್ಲರ್ ಜಾನರ್‌ನ ಈ ಸಿನಿಮಾದಲ್ಲಿ ಚಿತ್ರ ಎನ್ನುವ ಪಾತ್ರದಲ್ಲಿ ಗಾನವಿ ನಟಿಸಿದ್ದಾರೆ.ಈ ಹಿಂದೆ ‘ಆವಾಹಯಾಮಿ’ ಚಿತ್ರ ನಿರ್ದೇಶಿಸಿದ್ದ ಗಿರೀಶ್ ಕುಮಾರ್ ಅವರ ನಿರ್ದೇಶನದ ಎರಡನೇ ಚಿತ್ರವಿದು‌. ಗಿರೀಶ್ ಕುಮಾರ್, ಗಿರೀಶ್ ಬಿಜ್ಜಳ ಸೇರಿ ಚಿತ್ರಕಥೆ ರಚಿಸಿದ್ದಾರೆ.ನಟ ಫೋಟೊಗ್ರಫಿಯಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾನೆ. ಕೆಲ ಕಾರಣದಿಂದ ನಾಯಕಿಯೊಂದಿಗೆ ಜಗಳ ಮಾಡಿಕೊಂಡು ಏಕಾಂಗಿಯಾಗಿ ನಾಯಕ ಪ್ರವಾಸಕ್ಕೆ ತೆರಳುತ್ತಾನೆ. ಅಲ್ಲಿ ನಡೆಯುವ ವಿಚಿತ್ರ ಘಟನೆಗಳೇ ಚಿತ್ರದ ಕಥಾವಸ್ತು ಎಂದಿದೆ ಚಿತ್ರತಂಡ.

ವುಡ್‌ ಕ್ರೀಪರ್ಸ್‌ ಸಂಸ್ಥೆ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಶಿವು ಬೇರಗಿ ಹಾಗೂ ವಿಶ್ವಜಿತ್ ರಾವ್ ಬರೆದಿರುವ ಹಾಡುಗಳಿಗೆ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ. ಅಜೇಯ್ ಕುಮಾರ್ ಛಾಯಾಗ್ರಹಣ ಹಾಗೂ ರತೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. ಅವಿನಾಶ್, ಕಾರ್ತಿಕ್ ಸುಂದರಂ, ಗಿರೀಶ್ ಬಿಜ್ಜಳ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.