ADVERTISEMENT

ಹೊಸಬರ ‘ಹಫ್ತಾ’

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 19:30 IST
Last Updated 13 ಜೂನ್ 2019, 19:30 IST
ವರ್ಧನ್‌ ತೀರ್ಥಹಳ್ಳಿ
ವರ್ಧನ್‌ ತೀರ್ಥಹಳ್ಳಿ   

ಭೂಗತ ಲೋಕದಲ್ಲಿಹಫ್ತಾವಸೂಲಿ ಮಾಮೂಲು. ಇದರ ಸುತ್ತವೇ ಹೆಣೆಯಲಾದಕಥೆ‘ಹಫ್ತಾ’. ಇದು ಹೊಸಬರ ಚಿತ್ರ. ‘ಸೆಂಟಿಮೆಂಟ್ ನಾಟ್ ಅಲೋವ್ಡ್‌’ಅಡಿಬರಹ ನೀಡಲಾಗಿದೆ.ಶೀರ್ಷಿಕೆ ಕೇಳಿದರೆ ಇದೊಂದು ‘ವಸೂಲಿ’ ಕತೆ ಇರಬಹುದೆನಿಸಬಹುದು. ಆದರೆ, ವಾಸ್ತವದಲ್ಲಿ ಅದು ಅಲ್ಲ. ಕಡಲ ತೀರದ ಭೂಗತಲೋಕ ಮತ್ತು ಸುಪಾರಿ ಹತ್ಯೆ ಜೊತೆಗೆ ಬೇರೆ ರೀತಿಯ ಮತ್ತೊಂದು ಕುತೂಹಲದ ಸಂಗತಿಯೂ ಇದರಲ್ಲಿದೆಯಂತೆ. ಸಸ್ಪೆನ್ಸ್, ಥ್ರಿಲ್ಲಿಂಗ್ಮಾದರಿಯ ಸಿನಿಮಾ ಎನ್ನುವುದು ಟ್ರೇಲರ್‌ ನೋಡಿದಾಗ ಯಾರಿಗಾದರೂ ಅನಿಸುವುದು ಸಹಜ. ಈ ಸಿನಿಮಾ ಇದೇ 21ರಂದು ತೆರೆಗೆ ಬರಲು ಸಜ್ಜಾಗಿದೆ.

ಹಲವು ನಿರ್ದೇಶಕರ ಕೈಕೆಳಗೆ ಒಂದು ದಶಕ ದುಡಿದಿರುವಪ್ರಕಾಶ್‌ ಹೆಬ್ಬಾಳ್, ಈ ಸಿನಿಮಾಕ್ಕೆ ಮೊದಲ ಬಾರಿಗೆ ಆ್ಯಕ್ಷನ್‌ ಕಟ್ ಹೇಳಿದ್ದಾರೆ.ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ನೊಗವನ್ನೂ ಹೊತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ಖುಷಿಯನ್ನು ಹಂಚಿಕೊಳ್ಳಲು ಅವರು ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದರು.

ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು ಬೆಂಗಳೂರಿನಲ್ಲಿ ‘ಹಫ್ತಾ’ ಚಿತ್ರೀಕರಣ ಮಾಡಲಾಗಿದೆ. 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ, ಖಳನಟನಾಗಿ ನಟಿಸಿದ್ದ ವರ್ಧನ್‍ ತೀರ್ಥಹಳ್ಳಿ ಮೊದಲ ಬಾರಿ ನಾಯಕನಾಗಿ, ಎರಡು ಶೇಡ್‍ಗಳಲ್ಲಿ ಅದರಲ್ಲೂ ಒಂದು ಹಂತದಲ್ಲಿ ಮಂಗಳಮುಖಿಯಾಗಿ ಕಾಣಿಸಿಕೊಂಡಿದ್ದಾರಂತೆ.

ADVERTISEMENT

ಸೈಲೆಂಟ್‌ ಕಿಲ್ಲರ್‌ ಪಾತ್ರದಲ್ಲಿ ನಟಿಸಿರುವರಾಘವನಾಗ್ ಅವರಿಗೆ ಇದುನಾಯಕನಾಗಿ ಮೂರನೇಯ ಸಿನಿಮಾ. ಭರತನಾಟ್ಯ ವಿದ್ಯಾರ್ಥಿಯಾಗಿ ಬಿಂಬಶ್ರೀ ನೀನಾಸಂ, ರೂಪದರ್ಶಿಯಾಗಿರುವ ಕೊಡಗಿನ ಸೌಮ್ಯ ತಿತಿರ ಅವರು ಚೂಚ್ಚಲ ಚಿತ್ರದಲ್ಲೆ ವೇಶ್ಯೆಯ ಪಾತ್ರದಲ್ಲಿ, ಮುಖ್ಯ ಖಳನಾಯಕನಾಗಿ ಬಾಲರಜವಾಡಿ ನಟಿಸಿದ್ದಾರೆ.ದಶಾವರ ಚಂದ್ರು, ಉಗ್ರಂ ರವಿ ತಾರಾಗಣದಲ್ಲಿದ್ದಾರೆ. ಹಿನ್ನೆಲೆ ಸಂಗೀತ ಗೌತಂ ಶ್ರೀವತ್ಸ, ಛಾಯಾಗ್ರಹಣ ಸೂರಿ ಸಿನಿಟೆಕ್, ಸಂಕಲನ ರಘುನಾಥ್ ಎಲ್. ಅವರದ್ದು.ಮೈತ್ರಿ ಮಂಜುನಾಥ್ ಮತ್ತು ಬಾಲರಾಜ್ ಟಿ.ಸಿ.ಪಾಳ್ಯ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.

ಕೆಂಪೇಗೌಡ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಟ್ರೇಲರ್‌ ಬಿಡುಗಡೆ ಮಾಡಿದರು. ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಬಾ.ಮ.ಹರೀಶ್, ಖಜಾಂಚಿ ವೀರೇಶ್, ರಕ್ಷಣಾ ವೇದಿಕೆಯ ಗಾದಿ ಆಂಜನಪ್ಪ, ಅನಿತಾ ಬಂಗಾರಪ್ಪ, ಲಲ್ಲೇಶ್‍ರೆಡ್ಡಿ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.