ADVERTISEMENT

ಹಾಲೋಮ್ಯಾನ್‌ ಖ್ಯಾತಿಯ ಶರವಣ ಧನಪಾಲ್ ನಿಧನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 9:37 IST
Last Updated 22 ಸೆಪ್ಟೆಂಬರ್ 2022, 9:37 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಹಾಲೋಮ್ಯಾನ್‌ ಖ್ಯಾತಿಯ ಬಲೂನ್‌ ಆ್ಯಕ್ಟ್‌ ಕಲಾವಿದಶರವಣ ಧನಪಾಲ್ ನಿಧನರಾಗಿದ್ದಾರೆ.

ಅವರು ಹಲವಾರು ವೇದಿಕೆ ಕಾರ್ಯಕ್ರಮಗಳ ಮೂಲಕ ಪ್ರಸಿದ್ದರಾಗಿದ್ದರು. ಅವರು ಮಾಡುವ ಬಲೂನ್ ಆಕ್ಟ್ ತುಂಬ ಜನಪ್ರಿಯವಾಗಿತ್ತು.

ಕಿಡ್ನಿ ವೈಫಲ್ಯದಿಂದ ಶರವಣ ಧನಪಾಲ್ ಬುಧವಾರ ರಾತ್ರಿ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ಧನಪಾಲ್‌ ಅವರ ಬಲೂನ್‌ ಆಕ್ಟ್‌ಗೆ ಚಂದನವನದ ಸಾಕಷ್ಟು ನಟ, ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.