ADVERTISEMENT

ಅನುಷ್ಕಾ ಶರ್ಮಾ ಜನ್ಮದಿನ: 32ನೇ ವಸಂತಕ್ಕೆ ಕಾಲಿಟ್ಟ ಕೊಹ್ಲಿ ಪತ್ನಿ

​ಪ್ರಜಾವಾಣಿ ವಾರ್ತೆ
Published 1 ಮೇ 2020, 9:24 IST
Last Updated 1 ಮೇ 2020, 9:24 IST
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ   

ಮುಂಬೈ: ಬಾಲಿವುಡ್ ಬೇಡಿಕೆಯ ನಟಿ ಹಾಗೂ ಕ್ರಿಕೆಟಿಗ ವಿರಾಟ್‌ ಕೊಹ್ಲಿಯ ಮುದ್ದಿನ ಪತ್ನಿ ಅನುಷ್ಕಾ ಶರ್ಮಾಗೆ ಇಂದು (ಮೇ 1) 32ನೇ ವರ್ಷದ ಜನ್ಮದಿನಸಂಭ್ರಮ.

ಕೊಹ್ಲಿ ಫ್ಯಾನ್ಸ್‌ ಸೇರಿದಂತೆ ಅನುಷ್ಕಾ ಅಭಿಮಾನಿಗಳು ಹಾಗೂ ಸಿನಿಮಾರಂಗದ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟು ಹಬ್ಬದ ಶುಭಾಶಯ ಹೇಳುತ್ತಿದ್ದಾರೆ.

ಅನುಷ್ಕಾ ಸಹೋದರ ಕರಣೇಶ್‌ ಶರ್ಮಾ ಬಾಲ್ಯದ ಫೋಟೊಗಳನ್ನು ಶೇರ್ ಮಾಡುವ ಮೂಲಕ ಜನ್ಮದಿನದ ಶುಭಾಶಯಕೋರಿದ್ದಾರೆ.

ಕೊರೊನಾ ವೈರಸ್‌ ಪರಿಣಾಮ ಅನುಷ್ಕಾ ಜನ್ಮದಿನವನ್ನು ಮನೆಯಲ್ಲೇ ಸರಳವಾಗಿ ಆಚರಿಸಿಕೊಂಡಿದ್ದಾರೆ.

ADVERTISEMENT

ಅನುಷ್ಕಾ ಶರ್ಮಾ ಬಣ್ಣದ ಲೋಕಕ್ಕೆ ಕಾಲಿಟ್ಟು 12 ವರ್ಷಗಳು ಕಳೆದಿವೆ. ಅವರು 2008ರಲ್ಲಿ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದರು. ಪಿಕೆ, ಸುಲ್ತಾನ್‌, ಸಂಜು ಸೇರಿದಂತೆ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಅನುಷ್ಕಾ ನಟಿಸಿದ್ದಾರೆ. ಜಿರೋ ಸಿನಿಮಾದ ಬಳಿಕ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.