ADVERTISEMENT

ನಡುಗುವ ಕೈ, ಮೈ.. ತಮಿಳು ನಟ ವಿಶಾಲ್‌ಗೆ ಏನಾಯಿತು?

ತಮಿಳು ನಟ, ನಿರ್ಮಾಪಕ ವಿಶಾಲ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜನವರಿ 2025, 7:47 IST
Last Updated 7 ಜನವರಿ 2025, 7:47 IST
<div class="paragraphs"><p>ನಟ ವಿಶಾಲ್‌</p></div>

ನಟ ವಿಶಾಲ್‌

   

ಬೆಂಗಳೂರು: ತಮಿಳು ನಟ, ನಿರ್ಮಾಪಕ ವಿಶಾಲ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚೆನ್ನೈನಲ್ಲಿ ಇತ್ತೀಚೆಗೆ ನಡೆದ 'ಮದಗಜರಾಜ' ಸಿನಿಮಾದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶಾಲ್ ಅವರು ತೀವ್ರ ಬಳಲಿರುವಂತೆ ಕಂಡು ಬಂದಿದ್ದರು. ಇದರಿಂದ ಅವರ ಅಭಿಮಾನಿಗಳು ಆತಂಕಕ್ಕೆ ಈಡಾಗಿದ್ದರು.

ADVERTISEMENT

ವಿಶಾಲ್ ಅವರಿಗೆ ವೈರಲ್ ಸೋಂಕು ತಗುಲಿದ್ದು ವೈದ್ಯಕೀಯ ನಿಗಾದಲ್ಲಿದ್ದಾರೆ, ಐದಾರು ದಿನ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಆಸ್ಪತ್ರೆಯ ಹೆಲ್ತ್ ಬುಲೆಟಿನ್ ಹೇಳಿದೆ.

ಕಾರ್ಯಕ್ರಮದಲ್ಲಿ ವಿಶಾಲ್ ಮಾತನಾಡುವಾಗ ಅವರ ಕಣ್ಣು ಕೆಂಪಾಗಿದ್ದವು, ಮೈ–ಕೈ ನಡುಗುತ್ತಿರುವುದು ಕಂಡು ಬಂದಿತ್ತು. ಕುತ್ತಿಗೆ ಬಳಿ ಗಾಯವಾಗಿತ್ತು.

ಇತ್ತೀಚೆಗೆ ತೆರೆ ಕಂಡಿದ್ದ ಮಾರ್ಕ್ ಆ್ಯಂಟನಿ ಸಿನಿಮಾದ ಶೂಟಿಂಗ್ ವೇಳೆ ವಿಶಾಲ್ ಗಂಭೀರವಾಗಿ ಗಾಯಗೊಂಡಿದ್ದರು. ಅಲ್ಲಿಂದ ಅವರ ಆರೋಗ್ಯದಲ್ಲಿ ತೊಂದರೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಸುಂದರ್ ಸಿ ನಿರ್ದೇಶನದ ಮದಗಜರಾಜ ಸಿನಿಮಾ 12 ವರ್ಷದ ಹಿಂದೆಯೇ ಘೋಷಣೆಯಾಗಿತ್ತು. ಎಲ್ಲಾ ತೊಡಕುಗಳನ್ನು ಮೀರಿ ಈಗ ಅಂದರೆ ಜನವರಿ 10ರಂದು ಬಿಡುಗಡೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.