ADVERTISEMENT

ಹಿಂದಿ ಕಿರುತೆರೆ ನಟಿ ಲೀನಾ ಆಚಾರ್ಯ ನಿಧನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 6:46 IST
Last Updated 22 ನವೆಂಬರ್ 2020, 6:46 IST
ಲೀನಾ ಆಚಾರ್ಯ
ಲೀನಾ ಆಚಾರ್ಯ   

ಶೇಠ್ ಜೀ, ಆಪ್ ಕೇ ಆ ಜಾನೇ ಸೇ, ಮೇರಿ ಹಾನಿಕಾಕರ್ ಬೀವೀ ಹಾಗೂ ಕ್ಲಾಸ್ ಆಫ್ 2020 ಮುಂತಾದ ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದ ಲೀನಾ ಆಚಾರ್ಯಕಿಡ್ನಿ ವೈಫಲ್ಯದಿಂದ ನಿಧನ ಹೊಂದಿದ್ದಾರೆ. ಬಾಲಿವುಡ್‌ನ ಹಿಚ್ಕಿ ಸಿನಿಮಾದಲ್ಲೂ ಆಕೆ ನಟಿಸಿದ್ದರು.

‘ಲೀನಾ ಕಳೆದ ಒಂದೂವರೆ ವರ್ಷದಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ತಾಯಿ ಅವರಿಗೆ ಮೂತ್ರಪಿಂಡ ದಾನ ಮಾಡಿದ್ದರು. ಆದರೂ ಆಕೆ ಬದುಕಲಿಲ್ಲ’ ಎಂದು ಟೈಮ್ಸ್ ಆಫ್ ಇಂಡಿಯಾಗೆ ಹೇಳಿದ್ದಾರೆ ಶೇಠ್‌ ಜೀ ಸಹನಟ ವರ್ಷಿಪ್‌ ಖನ್ನಾ.

ಕ್ಲಾಸ್ ಆಫ್ 2020 ನಟ ರೋಹನ್ ಮೆಹ್ರಾ ಲೀನಾ ಸಾವಿಗೆ ಕಂಬನಿ ಮಿಡಿದಿದ್ದಾರೆ.

ADVERTISEMENT

ಅಲ್ಲದೇ ಟ್ವಿಟ್ಟರ್ ಖಾತೆಯಲ್ಲಿ ‘ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಲೀನಾ ಮ್ಯಾಮ್‌, ಕಳೆದ ವರ್ಷ ಈ ಸಮಯದಲ್ಲಿ ನಾವು ಕ್ಲಾಸ್ ಆಫ್ 2020 ಶೂಟಿಂನ್‌ನಲ್ಲಿದ್ದೆವು. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ನಟ ಅಭಿಷೇಕ್ ಭಾಲೇರಾವ್ ಕೂಡ ಲೀನಾ ಹಾಗೂ ತಮ್ಮ ನಡುವೆ ನಡೆದ ವಾಟ್ಸ್‌ಆ್ಯಪ್‌ ಸಂದೇಶದ ಸ್ಕ್ರೀನ್ ಶಾಟ್ ಹಂಚಿಕೊಂಡು ದುಃಖ ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.