ADVERTISEMENT

ದಾಖಲೆ ಬರೆದ ‘ಅವೆಂಜರ್ಸ್‌ ಎಂಡ್‌ಗೇಮ್‌’

​ಪ್ರಜಾವಾಣಿ ವಾರ್ತೆ
Published 1 ಮೇ 2019, 16:08 IST
Last Updated 1 ಮೇ 2019, 16:08 IST
ಅವೆಂಜರ್ಸ್ ದಿ ಎಂಡ್‌ಗೇಮ್ ಚಿತ್ರದ ಪೋಸ್ಟರ್‌
ಅವೆಂಜರ್ಸ್ ದಿ ಎಂಡ್‌ಗೇಮ್ ಚಿತ್ರದ ಪೋಸ್ಟರ್‌   

ಬಹುನಿರೀಕ್ಷೆಯೊಂದಿಗೆ ಬಿಡುಗಡೆಯಾದ ಹಾಲಿವುಡ್‌ನ ಅವೆಂಜರ್ಸ್‌ ಸರಣಿಯ ‘ಅವೆಂಜರ್ಸ್ ಎಂಡ್‌ಗೇಮ್‌’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಲೇ ಇದೆ. ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರ ಐದನೇ ದಿನಕ್ಕೆ ₹8,384ಕೋಟಿ ಬಾಚಿ ದಾಖಲೆ ನಿರ್ಮಿಸಿದೆ. ಈ ಮೂಲಕ ಅತ್ಯಂತ ವೇಗವಾಗಿ ಬಿಲಿಯನ್ ಡಾಲರ್ ಕ್ಲಬ್‌ಗೆ ಸೇರಿದ ಮೊದಲ ಚಿತ್ರವಾಗಿ ಸದ್ದು ಮಾಡಿದೆ.

2018ರಲ್ಲಿ ಬಿಡುಗಡೆಯಾಗಿದ್ದ ಅವೆಂಜರ್ಸ್ ಸರಣಿಯ ‘ಅವೆಂಜರ್ಸ್– ಇನ್ಫಿನಿಟಿ ವಾರ್‌’ ಚಿತ್ರ 11 ದಿನಗಳಲ್ಲಿ ಬಿಲಿಯನ್ ಡಾಲರ್ ಕ್ಲಬ್‌ಗೆ ಸೇರಿತ್ತು.

ಇನ್ನು ಭಾರತದ ಮಾರುಕಟ್ಟೆಯಲ್ಲೂ ಚಿತ್ರ ಸದ್ದು ಮಾಡಿದ್ದು, ಶುಕ್ರವಾರ ₹53 ಕೋಟಿ, ಶನಿವಾರ ₹51 ಕೋಟಿ, ಭಾನುವಾರ ₹52 ಕೋಟಿ ಸೇರಿದಂತೆ ಸುಮಾರು ₹157 ಕೋಟಿ ವಸೂಲಿ ಮಾಡಿ ದಾಖಲೆ ಬರೆದಿದೆ. ವಿಶೇಷವೆಂದರೆ ಈವರೆಗೆ ಬಾಲಿವುಡ್‌ನ ಯಾವ ಚಿತ್ರವೂ ಈ ಮಟ್ಟಿಗೆ ವಸೂಲಿ ಮಾಡಿಲ್ಲ.

ADVERTISEMENT

ಭಾರತವಷ್ಟೇ ಅಲ್ಲದೇ, ಚೀನಾ, ದಕ್ಷಿಣ ಕೊರಿಯಾ, ಬ್ರೆಜಿಲ್, ಆಸ್ಟ್ರೇಲಿಯಾ ಸೇರಿದಂತೆ 44 ದೇಶಗಳಲ್ಲಿ ಅತಿ ಹೆಚ್ಚು ಹಣ ಗಳಿಸಿದ ಚಿತ್ರವಾಗಿಯೂ ದಾಖಲೆ ಬರೆದಿದೆ.ಕೆಲವು ದೇಶಗಳಲ್ಲಿ ಈ ಚಿತ್ರ ಬುಧವಾರ ಬಿಡುಗಡೆಯಾಗಿದ್ದರೆ, ಇನ್ನೂ ಕೆಲವು ದೇಶಗಳಲ್ಲಿ ಶುಕ್ರವಾರ (ಏಪ್ರಿಲ್ 26) ಬಿಡುಗಡೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.