ADVERTISEMENT

VIDEO | ಅಪ್ಪು ಹಾಡುಗಳ ಅಂತ್ಯಾಕ್ಷರಿ ಹಾಡಿದ ಹಾಸ್ಟೆಲ್‌ ಹುಡುಗರು!

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 7:09 IST
Last Updated 15 ಮಾರ್ಚ್ 2022, 7:09 IST
ಪುನೀತ್‌ ರಾಜ್‌ಕುಮಾರ್‌
ಪುನೀತ್‌ ರಾಜ್‌ಕುಮಾರ್‌   

ಚಂದನವನದಲ್ಲಿ 'ಹಾಸ್ಟೆಲ್‌ ಹುಡುಗರು' ಚಿತ್ರತಂಡ ಪುನೀತ್‌ ರಾಜ್‌ಕುಮಾರ್‌ ನೆನಪಿಗಾಗಿ ’ಅಪ್ಪು’ ಗಾಯನದ ಹಾಡುಗಳ ಅಂತ್ಯಾಕ್ಷರಿ ಹಾಡಿರುವ ವಿಡಿಯೊವನ್ನು ಬಿಡುಗಡೆ ಮಾಡಿದೆ.

ಶೈಕ್ಷಣಿಕ ಪ್ರವಾಸಕ್ಕೆ ಹೊರಟಿರುವ ಚಿತ್ರತಂಡದ ಸದಸ್ಯರು ಬಸ್ಸಿನಲ್ಲಿ ಅಪ್ಪು ಹಾಡುಗಳ ಅಂತ್ಯಾಕ್ಷರಿಯನ್ನು ಹಾಡಿದ್ದಾರೆ.

ಈ ವಿಡಿಯೊ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು ಅಪ್ಪು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಪ್ಪು ಜನ್ಮದಿನ ಹಾಗೂ ಜೇಮ್ಸ್‌ ಸಿನಿಮಾ ಬಿಡುಗಡೆಯ ಈ ಸಂದರ್ಭದಲ್ಲಿ ಚಿತ್ರತಂಡ ಈ ವಿಡಿಯೊವನ್ನು ಬಿಡುಗಡೆ ಮಾಡಿದೆ.

ADVERTISEMENT

ಈ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದು, ವರುಣ್ ಕುಮಾರ್ ಹಾಗೂ ಪ್ರಜ್ವಲ್ ಗೌಡ ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.